ಕ್ರಿಕೆಟ್‌ನಲ್ಲಿ ನಿಶ್ಮಿತಾ ದಳಿ ತಂಡ ಚಾಂಪಿಯನ್

cricket
ಕೊಲ್ಲೂರು ಮೂಕಾಂಬಿಕಾ ಕ್ರೀಡಾಂಗಣದಲ್ಲಿ ಫೈವ್‌ಸ್ಟಾರ್ ಫ್ರೆಂಡ್ಸ್ ವತಿಯಿಂದ ನಡೆದ 30 ಗಜಗಳ ಹೊನಲು ಬೆಳಕಿನ ಕ್ರಿಕೆಟ್ ಟೂರ್ನಿಯಲ್ಲಿ ರಾಜು ಮೊಗವೀರ ಮಾಲಿಕತ್ವದ ನಿಶ್ಮಿತಾ ದಳಿ ಚಾಂಪಿಯನ್ ಆಗಿ ಹೊರಹೊಮ್ಮಿತು.
Published on

ಬೈಂದೂರು: ಕೊಲ್ಲೂರು ಮೂಕಾಂಬಿಕಾ ಕ್ರೀಡಾಂಗಣದಲ್ಲಿ ಫೈವ್‌ಸ್ಟಾರ್ ಫ್ರೆಂಡ್ಸ್ ವತಿಯಿಂದ ನಡೆದ 30 ಗಜಗಳ ಹೊನಲು ಬೆಳಕಿನ ಕ್ರಿಕೆಟ್ ಟೂರ್ನಿಯಲ್ಲಿ ರಾಜು ಮೊಗವೀರ ಮಾಲಿಕತ್ವದ ನಿಶ್ಮಿತಾ ದಳಿ ಚಾಂಪಿಯನ್ ಆಗಿ ಹೊರಹೊಮ್ಮಿತು.

ರಾಘು ಬಳೆಗಾರ್ ಮಾಲಿಕತ್ವದ ನಾಗಚೌಡೇಶ್ವರಿ ತಂಡ ರನ್ನರ್‌ಅಪ್‌ಗೆ ತೃಪ್ತಿಗೊಂಡಿತು. ಸರಣಿ ಶ್ರೇಷ್ಠ ಆಟಗಾರರಾಗಿ ನಾಗೇಂದ್ರ ಬಳೆಗಾರ, ಉತ್ತಮ ಬೌಲರ್ ನಾಗರಾಜ್ ಅಡಿಗ, ಉತ್ತಮ ಬ್ಯಾಟರ್ ಅವಿನಾಶ್ ಆಚಾರ್ಯ ಮತ್ತು ಫೈನಲ್‌ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ವಿನೋದ್ ಭಟ್ ಪಡೆದುಕೊಂಡರು.

ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಟೂರ್ನಿ ಉದ್ಘಾಟಿಸಿದರು. ಅಬಾಕಾಸನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಆದ್ಯಾ ಕಾಂಚನ್, 16ರ ವಯೋಮಿತಿಯ ಕ್ರಿಕೆಟ್ ಹಾರ್ಡ್‌ಬಾಲ್ ಕರ್ನಾಟಕ ತಂಡ ಪ್ರತಿನಿಧಿಸಿದ ಆದಿತ್ಯ ಅಜಯ್, ನಾಗೇಂದ್ರ ಆಚಾರ್, ಕೆಪಿಎಲ್ ಅಧ್ಯಕ್ಷ ನಾಗೇಶ್ ಬಾಳಿಗ ಅವರನ್ನು ಸನ್ಮಾನಿಸಲಾಯಿತು. ಗ್ರಾಪಂ ಅಧ್ಯಕ್ಷೆ ಪ್ರಸನ್ನಾ ಶರ್ಮ, ಉಪಾಧ್ಯಕ್ಷ ನಾಗೇಶ್ ದಳಿ, ಠಾಣಾಧಿಕಾರಿ ಸುಧಾರಾಣಿ, ಸಹಕಾರಿ ಸಂಘದ ಅಧ್ಯಕ್ಷ ಚಂದ್ರಶೇಖರ್ ಅಡಿಗ, ನಿರ್ದೇಶಕ ಚಂದ್ರ ಬಳೆಗಾರ, ಕಿಶನ್ ಶೆಟ್ಟಿ ಹಾಗೂ ಫೈವ್‌ಸ್ಟಾರ್ ಫ್ರೆಂಡ್ಸ್ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net