ಅಮೃತ ಭಾರತಿ ವಿದ್ಯಾರ್ಥಿಗಳಿಂದ ತಾಳಮದ್ದಳೆ

rangothsava
Published on

ಹೆಬ್ರಿ: ನಮ ತುಳುವೆರ್ ಕಲಾ ಸಂಘಟನೆ ನಾಟ್ಕದೂರು ಮುದ್ರಾಡಿಯಲ್ಲಿ ನಡೆದ ಸುವರ್ಣ ಕರ್ನಾಟಕ ರಂಗೋತ್ಸವದಲ್ಲಿ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮ ಹೈಸ್ಕೂಲ್ ವಿಭಾಗದ ವಿದ್ಯಾರ್ಥಿಗಳು ಕೃಷ್ಣಾರ್ಜುನ ಕಾಳಗ ತಾಳಮದ್ದಳೆ ಪ್ರದರ್ಶನ ನೀಡಿದರು.

ಹಿಮ್ಮೇಳದಲ್ಲಿ ಪಿ.ವಿ.ಆನಂದ ಸಾಲಿಗ್ರಾಮ ಭಾಗವತಿಕೆ ಮಾಡಿದರು. ಸಂಸ್ಥೆಯ ಕನ್ನಡ ಅಧ್ಯಾಪಕ ಮಹೇಶ್ ಹೈಕಾಡಿ ತಾಳಮದ್ದಳೆ ನಿರ್ದೇಶನ ನಿರ್ವಹಿಸಿದರು. ಅಮೃತ ಭಾರತಿ ಟ್ರಸ್ಟಿ ಯೋಗೀಶ್ ಭಟ್ ತಾಳಮದ್ದಳೆ ಸಂಘಟನೆ ನೇತೃತ್ವ ವಹಿಸಿದ್ದರು. ಕೃಷ್ಣನ ಪಾತ್ರಧಾರಿಯಾಗಿ ಪ್ರತೀಕ್ ಕುಮಾರ್, ಅಭಿಮನ್ಯುವಾಗಿ ಶ್ರೀಅವಿಘ್ನ, ದಾರುಕನಾಗಿ ಶಯನ್, ಅರ್ಜುನನಾಗಿ ಆತ್ರೇಯಾ, ಸುಭದ್ರೆಯಾಗಿ ನೀರಜ್, ಭೀಮನ ಪಾತ್ರದಲ್ಲಿ ಹಿತಾರ್ಥ ಅರ್ಥಧಾರಿಯಾಗಿದ್ದರು. ನಮ ತುಳುವೆರ್ ಕಲಾ ಸಂಘಟನೆ ಸುಕುಮಾರ ಮೋಹನ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net