ಆರೋಗ್ಯ ಸೇವೆ ಪ್ರಗತಿಯತ್ತ ಹೆಜ್ಜೆ

city scan
ಕಾರ್ಕಳದ ಡಾ.ಟಿಎಂಎ ಪೈ ರೋಟರಿ ಆಸ್ಪತ್ರೆಯಲ್ಲಿ ಇತ್ತೀಚೆಗೆ ಅಧಿಕೃತವಾಗಿ ಸಿಟಿ ಸ್ಕಾೃನ್ ಸೌಲಭ್ಯದ ಉದ್ಘಾಟನಾ ಸಮಾರಂಭ ಇತ್ತೀಚೆಗೆ ನಡೆಯಿತು.
Published on

ಕಾರ್ಕಳ: ಆರೋಗ್ಯ ಸೇವೆಗಳ ಪ್ರಗತಿಯತ್ತ ಮಹತ್ವದ ಹೆಜ್ಜೆಯಾಗಿ ಕಾರ್ಕಳದ ಡಾ.ಟಿಎಂಎ ಪೈ ರೋಟರಿ ಆಸ್ಪತ್ರೆ ಸಾಗುತ್ತಿದೆ. ಅತ್ಯಾಧುನಿಕ ಸೌಲಭ್ಯದ ಜತೆಗೆ ರೋಗಿಗಳ ಆರೈಕೆಗೆ ಆಸ್ಪತ್ರೆಯ ರೋಗ ನಿರ್ಣಯದ ಸಾಮರ್ಥ್ಯ ಹೊಂದಿದ್ದು ತ್ವರಿತವಾಗಿ ರೋಗ ನಿರ್ಣಯದ ಮೂಲಕ ಸುಧಾರಿತ ಚಿಕಿತ್ಸೆ ಸಕ್ರಿಯಗೊಳಿಸಲು ಸಹಾಯ ಮಾಡುತ್ತದೆ ಎಂದು ಮಣಿಪಾಲ್ ಹೆಲ್ತ್ ಎಂಟರ್‌ಪ್ರೈಸಸ್ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ದಿಲೀಪ್ ಜೋಸ್ ಹೇಳಿದರು.

ಕಾರ್ಕಳದ ಡಾ.ಟಿಎಂಎ ಪೈ ರೋಟರಿ ಆಸ್ಪತ್ರೆಯಲ್ಲಿ ಇತ್ತೀಚೆಗೆ ಅಧಿಕೃತವಾಗಿ ಸಿಟಿ ಸ್ಕಾೃನ್ ಸೌಲಭ್ಯ ಉದ್ಘಾಟಿಸಿ ಮಾತನಾಡಿದರು. ಮಾಹೆ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್, ಮಾಹೆ ಟ್ರಸ್ಟಿ ವಸಂತಿ ಆರ್.ಪೈ, ಮಾಹೆಯ ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ.ವೆಂಕಟೇಶ್, ಮಣಿಪಾಲ ಹೆಲ್ತ್‌ಮ್ಯಾಪ್ ಡಯಾಗ್ನಾಸ್ಟಿಕ್ಸ್ ಪ್ರೈ.ಲಿ.ನ ಮುಖ್ಯ ರೇಡಿಯಾಲಾಜಿಸ್ಟ್ ಹಾಗೂ ಪ್ರಾದೇಶಿಕ ಮುಖ್ಯಸ್ಥ ಡಾ.ಸಂದೀಪ್ ಬಲ್ಲಾಳ್, ಮಾಹೆಯ ಆರೋಗ್ಯ ವಿಜ್ಞಾನಗಳ ಸಹ ಉಪಕುಲಪತಿ ಡಾ.ಶರತ್ ಕುಮಾರ್ ರಾವ್, ಮಾಹೆಯ ಸಿಒಒ ಡಾ.ರವಿರಾಜ್ ಎನ್.ಎಸ್., ಕೆಎಂಸಿ ಮಣಿಪಾಲ ಡೀನ್ ಡಾ.ಪದ್ಮರಾಜ್ ಹೆಗ್ಡೆ, ಮಾಹೆಯ ಬೋಧನಾ ಆಸ್ಪತ್ರೆಗಳ ಸಿಒಒ ಡಾ.ಆನಂದ್ ವೇಣುಗೋಪಾಲ್, ರೋಟರಿ ಕ್ಲಬ್ ಆಫ್ ಕಾರ್ಕಳ ರಾಕ್ ಸಿಟಿ ಅಧ್ಯಕ್ಷ ಉಪೇಂದ್ರ ವಾಗ್ಲೆ, ರೋಟರಿ ಕ್ಲಬ್ ಆಫ್ ಕಾರ್ಕಳ ಅಧ್ಯಕ್ಷ ಇಕ್ಬಾಲ್ ಅಹಮದ್, ಡಾ.ಟಿಎಂಎ ಪೈ ರೋಟರಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಕೀರ್ತಿನಾಥ ಬಲ್ಲಾಳ್, ಹಿರಿಯ ರೋಟರಿ ಸದಸ್ಯರು ಉಪಸ್ಥಿತರಿದ್ದರು.

ಸಮುದಾಯಕ್ಕೆ ಉನ್ನತ ದರ್ಜೆ ಆರೋಗ್ಯ ಸೇವೆ ಒದಗಿಸುವುದು ನಮ್ಮ ಬದ್ಧತೆಯ ಪ್ರಮುಖ ಹೆಜ್ಜೆ. ಈ ಸುಧಾರಿತ ರೋಗ ನಿರ್ಣಯ ಸೇವೆ ಹೆಚ್ಚು ನಿಖರ ಮತ್ತು ಸಮಯೋಚಿತ ರೋಗ ನಿರ್ಣಯ ಸಕ್ರಿಯಗೊಳಿಸುತ್ತದೆ, ಅಂತಿಮವಾಗಿ ರೋಗಿಗಳ ಉತ್ತಮ ಫಲಿತಾಂಶಗಳಿಗೆ ಕಾರಣವಾಗುತ್ತದೆ, ಪ್ರದೇಶಕ್ಕೆ ವಿಕಸನಗೊಳ್ಳುತ್ತಿರುವ ಆರೋಗ್ಯ ಅಗತ್ಯ ಪೂರೈಸಲು ನಮ್ಮ ಸೌಲಭ್ಯಗಳನ್ನು ನಿರಂತರವಾಗಿ ನವೀಕರಿಸಲು ನಾವು ಸಮರ್ಪಿತರಾಗಿದ್ದೇವೆ. -ಡಾ.ಎಚ್.ಎಸ್.ಬಲ್ಲಾಳ್ ಮಾಹೆ ಸಹ ಕುಲಾಧಿಪತಿ https://www.vijayavani.net/haridasa-sahitya-international-conference-in-udupi https://www.vijayavani.net/farmer-dies-after-collapsing-due-to-heart-attack

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net