

* ಗ್ರಾಮಕ್ಕಿದೆ ದೇವತೆಗಳ ಆಗಮನದ ಇತಿಹಾಸ
* ದೇವಿಗೆ ಸಹಾಯ ಹಸ್ತ ನೀಡಿದ ವಾನರ
ಚೇತನ್ ಚಕ್ಕೆರೆ ಬಿಡದಿ
ಒಂದೊಂದು ಗ್ರಾಮದ ಹಿಂದೆ ಅದರದ್ದೆ ಆದ ಇತಿಹಾಸ ಇರುತ್ತದೆ. ಅದೇ ರೀತಿ ಗ್ರಾಮಕ್ಕಿರುವ ಹೆಸರಿನ ಹಿಂದೆ ನೂರಾರು ವರ್ಷಗಳ ಹಿಂದಿನ ಘಟನೆಗಳು ಸಾಕ್ಷಿಯಾಗಿರುತ್ತವೆ. ಅಂತೆಯೇ ಬಿಡದಿಯ ತಾಳಕುಪ್ಪೆ ಗ್ರಾಮಕ್ಕೂ ವಿಶಿಷ್ಟ ಇತಿಹಾಸವಿದೆ.
ಹೌದು.. ದೇವಾನು ದೇವತೆಗಳ ಆಗಮನದ ಹಿನ್ನೆಲೆಯಲ್ಲಿ ಈ ಗ್ರಾಮಕ್ಕೆ ತಾಳಕುಪ್ಪೆ ಎಂದು ನಾಮಕರಣವಾಗಿದೆ. ಈ ಹೆಸರಿನ ಹಿಂದೆ ಬರಲು ಬಹಳ ರೋಚಕ ಕಥೆಯೇ ಇದೆ. ಪರಮೇಶ್ವರ ಹಾಗೂ ಪಾರ್ವತಿ ಈ ಗ್ರಾಮದ ಮಾರ್ಗವಾಗಿ ಹೋಗಿದ್ದರು ಎಂದು ಗ್ರಾಮದ ಹಿರಿಯರು ಹೇಳುತ್ತಾರೆ.
ಶ್ರೀಮಾನ್ ಈಶ್ವರ, ಶ್ರೀಮಾನ್ ನಾರಾಯಣ ಹಾಗೂ ಪಾರ್ವತಿ ಲೋಕ ಸಂಚಾರಕ್ಕೆ ಬಂದ ಸಂದ‘ರ್ದಲ್ಲಿ ಹಲಗೂರಿನ ಮುತ್ತತ್ತಿ ನದಿಯಲ್ಲಿ ಸ್ನಾನ ಮಾಡುವ ಸಂದ‘ರ್ದಲ್ಲಿ ಪಾರ್ವತಿಯ ಮೂಗುತಿ ಬಿದ್ದು ಹೋಗುತ್ತದೆ. ಈ ವೇಳೆ ಅಲ್ಲೆ ಮರದ ಮೇಲೆ ಇದ್ದ ವಾನರನನ್ನು ಕರೆದು ಮೂಗುತಿ ಹುಡುಕಿಕೊಡುವಂತೆ ಹೇಳುತ್ತಾಳೆ. ಆಗ ವಾನರ ಬಾಲದಿಂದ ನೀರನ್ನು ಖಾಲಿ ಮಾಡಿ ಪಾರ್ವತಿ ದೇವಿಯ ಮೂಗುತಿಯನ್ನು ಹುಡುಕಿ ಕೊಡುತ್ತಾನೆ. ಅದಕ್ಕೆ ಪ್ರತಿಯಾಗಿ ಪಾರ್ವತಿ ದೇವಿ ನಿನಗೂ ಇಲ್ಲಿ ಪೂಜೆ ಸಲ್ಲಬೇಕೆಂದು ಹೇಳಿ ಮುತ್ತೇತ್ತರಾಯ ಎಂದು ನಾಮಕರಣ ಮಾಡಿ, ನಾನು ಕರೆದಾಗ ನೀನು ಬರಬೇಕೆಂದು ಹೇಳಿ ಅಲ್ಲಿಂದ ಮುಂದೆ ಸಾಗಿದ್ದರು ಎನ್ನುವುದು ಇತಿಹಾಸ.
ಈ ತಾಳಕುಪ್ಪೆ ಗ್ರಾಮದ ಅಕ್ಕ ಪಕ್ಕ ಬೆಟ್ಟಗುಡ್ಡಗಳು ಇದ್ದ ಕಾರಣ ರಾಕ್ಷಸಿಯರು ಹೆಚ್ಚಾಗಿ ವಾಸ ಮಾಡುತ್ತಿದ್ದರು. ಇಂತಹ ಗ್ರಾಮದ ಕಡೆಗೆ ಪಾರ್ವತಿ ದೇವಿಯ ಸಂಚಾರ ಆದ ಸಂದ‘ರ್ದಲ್ಲಿ ಹೊಸದಮ್ಮ ಹಾಗೂ ಹಳೆಯಮ್ಮ ಎಂಬ ಇಬ್ಬರು ರಾಕ್ಷಸಿಯರು ಪಾರ್ವತಿ ದೇವಿ ಬಗ್ಗೆ ತಿಳಿಯದೆ ಅವರನ್ನು ತಡೆಯುತ್ತಾರೆ. ಈ ವೇಳೆ ಪಾರ್ವತಿ ದೇವಿ ಮತ್ತೆತ್ತರಾಯನನ್ನು ಕರೆಯುತ್ತಾಳೆ. ಮುತ್ತೆತ್ತರಾಮ ಅವಸರದಲ್ಲಿ ಬಂದು ಪಾರ್ವತಿ ದೇವಿಯನ್ನು ತಡೆದಿದ್ದ ಇಬ್ಬರು ರಾಕ್ಷಸಿಯರನ್ನು ಸಂಹಾರ ಮಾಡಲು ಮುಂದಾಗುತ್ತಾನೆ. ಈ ವೇಳೆ ಪಾರ್ವತಿ ಸ್ವಲ್ಪ ‘ತಾಳಪ್ಪ’ ಎಂದು ಕರೆಯುತ್ತಾಳೆ. ಹೀಗೆ ತಾಳಪ್ಪ ಎಂದು ಕರೆದ ಪದ ಇಂದು ತಾಳಕುಪ್ಪೆಯಾಗಿ ಬೆಳೆದಿದೆ.
ತಾಳಪ್ಪ ಎಂಬ ಪದದಿಂದ ಉದಯವಾದ ತಾಳಕುಪ್ಪೆಯಲ್ಲಿ ಹಲವು ಐತಿಹಾಸಿಕ ‘ಾರ್ಮಿಕ ದೇವಾಲಯಗಳಿವೆ. ಬೆಳಗೊಳಮ್ಮ, ಹೊಂಬಮ್ಮ, ಶಿವನ ದೇವಾಲಯ, ಬ್ಯಾಟರಾಯಪ್ಪ, ಬಸವಣ್ಣನ ದೇವಾಲಯ ಅವಸರದಮ್ಮ ದೇವಾಲಯಗಳಿವೆ. ಇದರಲ್ಲಿ ಅವಸರದಮ್ಮ ದೇವಾಲಯ ಹೆಚ್ಚು ಪ್ರಸಿದ್ಧಿಯಾಗಿದೆ. ಪ್ರತಿ ವರ್ಷ ಏಪ್ರಿಲ್ ತಿಂಗಳಲ್ಲಿ ಅದ್ದೂರಿ ಜಾತ್ರಾ ಮಹೋತ್ಸವ ನಡೆಯುತ್ತಿದೆ. ಆ ವೇಳೆ ಗ್ರಾಮದ ಹೊರಗೆ 101 ವಿವಿ‘ ನೈವೇದ್ಯದ ಎಡೆಯನ್ನು ಇಡುವ ಪದ್ಧತಿ ನಡೆಸಿಕೊಂಡು ಬಂದಿದ್ದಾರೆ. ಈ ಹಿಂದೆ ಗ್ರಾಮದಲ್ಲಿದ್ದ ರಾಕ್ಷಸಿಯರಿಗೆ ಎಡೆ ಇಡುವ ಸಲುವಾಗಿ 101 ಎಡೆಯ ನೈವೇದ್ಯ ಇಡುವುದು ವಾಡಿಕೆಯಾಗಿ ನಡೆದುಬಂದಿದೆ.
ಗ್ರಾಮದಲ್ಲಿ ಬಹಳ ವರ್ಷಗಳ ಹಿಂದೆಯೇ ಈ ದೇವಾಲಯ ನಿರ್ಮಾಣ ಮಾಡಲಾಗಿದೆ. ಪಾರ್ವತಿ ದೇವಿಯು ಅವಸರದಮ್ಮ ರೂಪದಲ್ಲಿ ನೆಲೆ ಕಂಡಿದ್ದಾಳೆ. ಈ ದೇವರ ಮೂರ್ತಿಯನ್ನು ಮೆರವಣಿಗೆ ಮಾಡಲು ಪ್ರಾರಂ‘ ಮಾಡಿದರೆ ಎಲ್ಲಿಯು ನಿಲ್ಲುವ ಹಾಗಿಲ್ಲ. ಯಾರ ಮನೆ ಬಳಿಯು ಹೆಚ್ಚು ಸಮಯ ನಿಲ್ಲದೆ ಅವಸರ ಅವಸರವಾಗಿ ಮುಂದಕ್ಕೆ ಹೋಗುತ್ತಾಳೆ. ಹಾಗಾಗಿಯೇ ಅವಸರದಮ್ಮ ಎಂಬ ಹೆಸರು ಬರಲೂ ಒಂದು ಕಾರಣ ಎನ್ನಲಾಗಿದೆ. ಈ ದೇವಾಲಯಕ್ಕೆ ರಾಜ್ಯದ ಹಲವು ಕಡೆ ‘ಕ್ತ ಸಮೂಹ ಇದೆ. ದೇವರ ಬಳಿ ಬಂದು ಹರಕೆ ಕಟ್ಟಿ ಕೇಳಿಕೊಂಡರೆ ‘ಕ್ತರ ಇಷ್ಟಾರ್ಥಗಳು ಸಿದ್ಧಿಯಾಗುತ್ತವೆ ಎಂಬ ನಂಬಿಕೆ ಇದೆ.