ಗುಂಡ್ಲುಪೇಟೆ: ಗೌತಮ ಬುದ್ಧರ ವಿಚಾರಗಳು ವೈಜ್ಞಾನಿಕ ಹಾಗೂ ವೈಚಾರಿಕ ತಳಹದಿಯ ಮೇಲೆ ನಿಂತಿದ್ದು, ಈ ಜ್ಞಾನದ ಬೆಳಕನ್ನು ಪ್ರಸರಣ ಮಾಡುವ ಸಲುವಾಗಿ ಮಾರ್ಚ್ 16 ರಂದು ದರ್ಶನ್ ಕನ್ವೆನ್ಷನಲ್ ಹಾಲ್‌ನಲ್ಲಿ ತಕ್ಷಶಿಲ ಟ್ರಸ್ಟ್‌ನ ಉದ್ಘಾಟನಾ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ಸುಭಾಷ್ ಮಾಡ್ರಹಳ್ಳಿ ಹೇಳಿದರು.
ಮೈಸೂರಿನ ವಿಶ್ವಮೈತ್ರಿ ಬುದ್ಧ ವಿಹಾರದ ಡಾ.ಕಲ್ಯಾಣಸಿರಿ ಭಂತೇಜಿ, ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಉದ್ಘಾಟನೆ ನೆರವೇರಿಸುವರು. ಮಾಜಿ ಸಚಿವ ಎನ್.ಮಹೇಶ ಲೋಗೋ ಅನಾವರಣ ಮಾಡುವರು. ಸಂಸದ ಸುನೀಲ್ ಬೋಸ್ ಅವರು ಕ್ಯಾಲೆಂಡರ್ ಬಿಡುಗಡೆ ಮಾಡುವರು. ನಾಯಕ ನಟ ಚೇತನ್, ಮಾಜಿ ಶಾಸಕ ಸಿ.ಎಸ್.ನಿರಂಜನ್ ಕುಮಾರ್, ಕೇಂದ್ರ ಸಾಹಿತ್ಯ ಪ್ರಶಸ್ತಿ ಪುರಸ್ಕೃತರಾದ ಡಾ.ಮೂಡ್ನಕೂಡು ಚಿನ್ನಸ್ವಾಮಿ ಹಾಗೂ ಅಕ್ಕ ಐಎಎಸ್ ಅಕಾಡೆಮಿ ನಿರ್ದೇಶಕ ಡಾ.ಶಿವಕುಮಾರ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಜಂಟಿನಿರ್ದೇಶಕಿ ಡಾ.ಲಕ್ಷ್ಮಮ್ಮ, ಚಿಂತಕ ಹ.ರಾ ಮಹೇಶ್, ಸುಜಾತಾ ಗಿರೀಶ್ ಬಾಬು, ಟ್ರಸ್ಟ್ ನ ಕಾರ್ಯದರ್ಶಿ ಡಾ ನವೀನ್ ಮೌರ್ಯ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಬಿ.ಡಿ.ಶಿವಬುದ್ದಿ, ಸ್ವಾಮಿ ಮರಳಾಪುರ, ಡಾ ರತ್ನಮ್ಮ, ಡಾ.ಕೃಷ್ಣಮೂರ್ತಿ ಚಮರಂ, ಸಿದ್ದರಾಜು ಕೆಬ್ಬೆಪುರ, ಉಮೇಶ್, ಆರ್.ಡಿ.ಉಲ್ಲಾಸ್, ವಿಷಕಂಠ, ಲೋಕೇಶ್ ಹಾಗೂ ನಾಗರಾಜ್ ಅವರನ್ನು ಇದೆ ವೇಳೆ ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಆರ್.ಸೋಮಣ್ಣ, ಮಾಧು, ಆರ್.ಡಿ.ಉಲ್ಲಾಸ್, ಬಸವಣ್ಣ, ಮಲ್ಲಿಕಾರ್ಜುನ, ಎಂ.ಶ್ರೀನಿವಾಸ್, ಮುತ್ತಣ್ಣ, ಜೆ.ಸ್ವಾಮಿ ಹಲವರು ಇದ್ದರು.