ನೇತ್ರ ತಪಾಸಣೆ ಶಿಬಿರ ಸದುಪಯೋಗ ಪಡಿಸಿಕೊಳ್ಳಿ

15-kglphoto-4,
Published on

ಕೊಳ್ಳೇಗಾಲ: ಪಟ್ಟಣದ ವಿಶ್ವಚೇತನ ಸಮೂಹ ವಿದ್ಯಾಸಂಸ್ಥೆ ಆವರಣದಲ್ಲಿ ಎಚ್.ಕೆ.ಟ್ರಸ್ಟ್ ಕೊಳ್ಳೇಗಾಲ, ರೋಟರಿ ಕ್ಲಬ್, ರೋಟರಿ ಮಿಡ್‌ಟೌನ್, ಅರವಿಂದ ಕಣ್ಣಿನ ಆಸ್ಪತ್ರೆ, ಕೊಯಮತ್ತೂರು ಸಹಯೋಗದಲ್ಲಿ ಭಾನುವಾರ ನೇತ್ರ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.


ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಎಚ್.ಕೆ.ಟ್ರಸ್ಟ್ ಸಂಸ್ಥಾಪಕ ಕಾರ್ಯದರ್ಶಿ ಪ್ರೇಮಲತಾ ಕೃಷ್ಣಸ್ವಾಮಿ, ಎಚ್.ಕೃಷ್ಣಸ್ವಾಮಿ ಹೆಸರಲ್ಲಿ ಪ್ರಾರಂಭವಾದ ನಮ್ಮ ಟ್ರಸ್ಟ್ ಬಡವರ ಹಾಗೂ ಹಿಂದುಳಿದ ವರ್ಗಗಳ ಜನರ ಸೇವೆಯನ್ನು ಮಾಡುವ ಉದ್ದೇಶದಿಂದ ಆರೋಗ್ಯ ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಪ್ರತಿ ತಿಂಗಳ 3ನೇ ಭಾನುವಾರ ನಡೆಯುವ ಕಣ್ಣಿನ ಉಚಿತ ತಪಾಸಣೆ ಕಾರ್ಯಕ್ರಮದ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ತಿಳಿಸಿದರು.


ಶಿಬಿರದಲ್ಲಿ 110 ರೋಗಿಗಳು ತಪಾಸಣೆಗೆ ಒಳಪಟ್ಟಿದ್ದು, ಅದರಲ್ಲಿ 57 ಜನರನ್ನು ಶಸ್ತ್ರಚಿಕಿತ್ಸೆಗಾಗಿ ಅರವಿಂದ ಕಣ್ಣಿನ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು.
ಬೆಂಗಳೂರಿನ ಡಿವೈಎಸ್ಪಿ ಮಹಾನಂದ್ ಕೃಷ್ಣಸ್ವಾಮಿ, ರೋಟರಿ ಮಾಜಿ ಅಧ್ಯಕ್ಷ ಗಿರೀಶ್ ಜಡೆ, ನಗರಸಭೆ ಮಾಜಿ ಉಪಾಧ್ಯಕ್ಷ ಹರ್ಷ, ಎಂಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಪ್ರವೀಣ್‌ಕುಮಾರ್, ದಕ್ಷಿಣಾಮೂರ್ತಿ, ಲೋಕೇಶ್, ಅರವಿಂದ ಕಣ್ಣಿನ ಆಸ್ಪತ್ರೆಯ ವೈದ್ಯ ಅಂಬರೀಶ್, ಸಂಯೋಜಕ ವಿಜಯ್‌ಕಾಂತ, ಎಚ್.ಕೆ.ಟ್ರಸ್ಟ್ ಸಂಸ್ಥೆಯ ಸಂಯೋಜಕ ರಾಜೇಶ್, ವಿದ್ಯಾಸಂಸ್ಥೆಯ ಪ್ರಭಾರ ಪ್ರಾಂಶುಪಾಲ ಭಾಸ್ಕರನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net