ಕೃಷಿ ಇಲಾಖೆ ಯೋಜನೆ ಸದುಪಯೋಗ ಮಾಡಿಕೊಳ್ಳಿ

20 MUL1
Published on

ಮುಳಗುಂದ: ಕೃಷಿ ಇಲಾಖೆಯಲ್ಲಿ ರೈತರಿಗಾಗಿ ಹಲವಾರು ಯೋಜನೆಗಳಿದ್ದು, ಅವುಗಳನ್ನು ಪ್ರತಿ ರೈತರು ಸದುಪಯೋಗಮಾಡಿಕೊಳ್ಳಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ರವಿ ಪಿ.ಆರ್. ಹೇಳಿದರು.

ಗುರುವಾರ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸರ್ಕಾರದ ಜಲಾನಯನ ಅಭಿವೃದ್ಧಿ ಇಲಾಖೆ, ಕೃಷಿ ಇಲಾಖೆ ಹಾಗೂ ಪಪಂಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸ್ವಸಹಾಯ ಸಂಘಗಳ ತರಬೇತಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ವಿಶ್ವ ಬ್ಯಾಂಕ್ ನೆರವಿನ ರಿವಾರ್ಡ ಯೋಜನೆಯಡಿ ಸಂಪೂರ್ಣ ಜಲಾನಯನ ಉಪಚಾರ ಕಾರ್ಯಕ್ರಮ ನಡೆಯುತ್ತಿದೆ. ಅದರಲ್ಲಿ ಭೂ ಸಂಪನ್ಮೂಲ ಮಾಹಿತಿ ಆಧರಿಸಿ ಮಣ್ಣು ಮತ್ತು ನೀರು ಸಂರಕ್ಷಣೆಗಾಗಿ ಸಮಗ್ರ ಯೋಜನೆಯನ್ನು ಕೃಷಿ ಇಲಾಖೆ ಹಮ್ಮಿಕೊಂಡಿದೆ. ರೈತರ ಜಮಿನಿನಲ್ಲಿ ಕೃಷಿ ಹೊಂಡ, ಬದುಗಳ ನಿರ್ವಣ, ಮಣ್ಣು ಪರೀಕ್ಷೆ, ಮಣ್ಣಿನ ಗುಣಧರ್ಮ, ಬೆಳೆ, ಮಾರುಕಟ್ಟೆ, ಕೃಷಿ ಸುರಕ್ಷತೆಗಾಗಿ ನವೀನ ಅಭಿವೃದ್ಧಿ ಹಾಗೂ ಜಲಾನಯನ ಪ್ರದೇಶಗಳನ್ನು ಪುನಶ್ಚೇತನಗೊಳಿಸುವುದರ ಮೂಲಕ ರೈತರನ್ನು ಆರ್ಥಿಕವಾಗಿ ಸದೃಢಗೊಳಿಸುವ ಉದ್ದೇಶ ಹೊಂದಿದ್ದು, ರೈತರು ಹಾಗೂ ಸ್ವಸಹಾಯ ಸಂಘಗಳ ಸದಸ್ಯರು ಇವುಗಳ ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ಪಪಂ ಮುಖ್ಯಾಧಿಕಾರಿ ಮಂಜುನಾಥ ಗುಳೇದ ಮಾತನಾಡಿ, ಈ ಎಲ್ಲ ಕಾರ್ಯಕ್ರಮಗಳ ಬಗ್ಗೆ ಸ್ವ ಸಹಾಯ ಗುಂಪುಗಳ ಸಂಯೋಜಕರಲ್ಲಿ ಮಾಹಿತಿ ಪಡೆದು ತರಬೇತಿ ಮುಂದುವರಿಸಿದಲ್ಲಿ ಭವಿಷ್ಯ ಉಜ್ವಲವಾಗಲಿದೆ. ತರಬೇತಿ ಸಂಪನ್ಮೂಲ ವ್ಯಕ್ತಿಗಳಿಂದ ನಡೆಯುತ್ತಿದ್ದು, ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು. ನಂತರ ಜವಾಹರ ರೋಜಗಾರ ಯೋಜನೆಯ ಸಂಯೋಜನಾಧಿಕಾರಿ ವಾಣಿಶ್ರೀ ನಿರಂಜನ ಮಾತನಾಡಿದರು.

ಗೀತಾ ಜಾಧವ, ಶೇಖರ ನಾಯಕ, ಪಲ್ಲವಿ, ಶಬನಮ್ ಬಾನು, ಖಾಸೀಮ ಹಾದಿಮನಿ, ಪ್ರಭು, ಮಂಜುನಾಥ ಕರಿಗಾರ, ಬಿ.ವಿ. ಸುಂಕಾಪೂರ, ಕೆ.ಎಂ. ಹೆರಕಲ್ಲ, ಎಂ.ಎಂ. ಕೊಪ್ಪಳ. ಶೇಖರ ನಾಯಕ್, ಮಂಜುನಾಥ ಬ್ಯಾಳಿ, ಕಾಶಿಮ್ ಹಾದಿಮನಿ, ಮಂಜುನಾಥ ಕರಿಗಾರ ಇದ್ದರು. ಕೃಷಿ ಇಲಾಖೆಯ ದ್ರಾಕ್ಷಾಯಣಿ ಕುರ್ತಕೋಟಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net