ಸರ್ಕಾರಿ ನಿವೇಶನ ಒತ್ತುವರಿ ತೆರವಿಗೆ ಕ್ರಮಕೈಗೊಳ್ಳಿ

HNL MANE MEETING
Published on

ಹಾನಗಲ್ಲ: ಸರ್ಕಾರಿ ನಿವೇಶನ ಒತ್ತುವರಿಯಾಗಿದ್ದರೆ ಕೂಡಲೇ ಸರ್ವೇ ಕೈಗೊಂಡು ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಶ್ರೀನಿವಾಸ ಸೂಚನೆ ನೀಡಿದರು.


ತಾಲೂಕಿನ ಅಕ್ಕಿಆಲೂರಿನ ಪ್ರವಾಸಿ ಮಂದಿರದಲ್ಲಿ ಭೂಮಾಪನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕಂದಾಯ ಸೇರಿ ಹಲವು ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಸರ್ಕಾರಿ ನಿವೇಶನ ಒತ್ತುವರಿಯ ಬಗೆಗೆ ಸಾಕಷ್ಟು ದೂರುಗಳಿವೆ. ಕ್ರಮಕ್ಕೆ ಏಕೆ ಹಿಂದೇಟು ಹಾಕಲಾಗುತ್ತಿದೆ ಎಂದು ಪ್ರಶ್ನಿಸಿದರು.


ತಾಲೂಕಿನ ದಶರಥಕೊಪ್ಪ ಗ್ರಾಮದಲ್ಲಿ ಅಂಗನವಾಡಿಗೆ ಸೇರಿದ ನಿವೇಶನ ಒತ್ತುವರಿಯಾಗಿದೆ. ಕೂಡಲೇ ಸರ್ವೇ ನಡೆಸಿ, ಒತ್ತುವರಿ ತೆರವುಗೊಳಿಸಿ. ಅದೇ ಗ್ರಾಮದ ರಿಸನಂ. 9ಎ/2ರ 32 ಎಕರೆಯಲ್ಲಿ 10 ಎಕರೆ ಜಮೀನನ್ನು ನಿವೇಶನ ರಹಿತರಿಗೆ ಹಂಚಿಕೆ ಮಾಡಿ, ಒತ್ತುವರಿ ಜಮೀನನ್ನು ತೆರವುಗೊಳಿಸಬೇಕು ಎಂದು ಸೂಚಿಸಿದರು.


ಇದೇ ಸಂದರ್ಭದಲ್ಲಿ ಹೊಸ ಅಂಗನವಾಡಿ ಕಟ್ಟಡಗಳ ನಿರ್ಮಾಣ, ಹಾನಿಗೊಂಡ ಕಟ್ಟಡಗಳ ದುರಸ್ತಿ ಬಗೆಗೆ ಸಿಡಿಪಿಒ ರಂಗನಾಥ ಅವರಿಂದ ಮಾಹಿತಿ ಪಡೆದ ಶಾಸಕ ಮಾನೆ, ನಿವೇಶನ, ಕಟ್ಟಡ ರಹಿತ ಅಂಗನವಾಡಿಗಳ ಕುರಿತು ಮಾಹಿತಿಕೊಡಿ ಎಂದರು.

ಸರ್ವೇಯರ್ ಪ್ರದೀಪ, ಕೊಪ್ಪರಸಿಕೊಪ್ಪ ಪಿಡಿಒ ರಮೇಶ ತಾಂಬೇಕರ, ದಶರಥಕೊಪ್ಪ ಗ್ರಾಮ ಲೆಕ್ಕಾಧಿಕಾರಿ ಯೋಗೇಶ ಕಟ್ಟಿಮನಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net