

ಹಿರೇಕೆರೂರ: ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರ ವಿರುದ್ಧ ಅಪಪ್ರಚಾರ ಮಾಡುವ ಮೂಲಕ, ಜಿಲ್ಲೆ, ತಾಲೂಕು ಸಂಘದ ಘನತೆಗೆ ಧಕ್ಕೆ ಉಂಟು ಮಾಡಿದವರ ವಿರುದ್ಧ ಶಿಸ್ತು ಕ್ರಮಕ್ಕಾಗಿ ಆಗ್ರಹಿಸಿ, ತಾಲೂಕು ಸರ್ಕಾರಿ ನೌಕರರ ಸಂಘದ ವತಿಯಿಂದ ಶುಕ್ರವಾರ ಪಟ್ಟಣದಲ್ಲಿ ತಹಸೀಲ್ದಾರ್ ಡಾ.ಎಚ್. ಪ್ರಭಾಕರಗೌಡ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಸಂಘದ ತಾಲೂಕು ಅಧ್ಯಕ್ಷ ಡಾ.ಎಸ್.ಪಿ. ಗೌಡರ ಮಾತನಾಡಿ, ಸರ್ಕಾರಿ ನೌಕರರ ಸಂಘಟನೆಯ ಬೆಳವಣಿಗೆ ಸಹಿಸದ ಕೆಲವರು ಒಳ ಪಿತೂರಿ ನಡೆಸಿ ಅಪಪ್ರಚಾರ ಮಾಡುತ್ತಿದ್ದಾರೆ. ಇದನ್ನು ಸಂಘಟನೆ ಸಹಿಸುವುದಿಲ್ಲ, ಸುಳ್ಳು ದೂರುದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ತಾಲೂಕ ಕಾರ್ಯದರ್ಶಿ ಕುಮಾರ ಮಡಿವಾಳರ, ಸದಸ್ಯರಾದ ಅವಿನಾಶ, ಕೆ.ಸಿ. ಯತ್ತಿನಮನಿ, ನೌಕರರಾದ ನಾಗರಾಜ ಕಟ್ಟಿಮನಿ, ರಘು ಭಜಂತ್ರಿ, ಜಡ್.ಎ. ಹೊಸಳ್ಳಿ, ಸಾಕಮ್ಮ ವಾಲ್ಮೀಕಿ ಇದ್ದರು.