ಸಮೀಕ್ಷೆ ಮಾಹಿತಿ ಪಡೆದ ತಹಸೀಲ್ದಾರ್

Oplus_16908288
Oplus_16908288
Published on

ಸಿದ್ದಾಪುರ: ವಿರಾಜಪೇಟೆ ತಹಸೀಲ್ದಾರ್ ಪ್ರವೀಣ್ ಅವರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಒಳಪಡದೆ ಇರುವ ಕಾರ್ಮಿಕರ ಬಗ್ಗೆ ಎಸ್ಟೇಟ್ ವ್ಯವಸ್ಥಾಪಕರಿಂದ ಗುರುವಾರ ಮಾಹಿತಿ ಪಡೆದರು.

ಅಮ್ಮತ್ತಿ ಹೋಬಳಿ ವ್ಯಾಪ್ತಿಯ ಇವಾಲ್ ಬ್ಯಾಕ್ ಸಂಸ್ಥೆಗೆ ಒಳಪಟ್ಟ ಬಿಬಿಟಿಸಿ ಶಾಖೆಗೆ ತೆರಳಿದ ಅವರು ತಮಿಳುನಾಡು ಸೇರಿದಂತೆ ಹೊರ ರಾಜ್ಯದ ವಲಸೆ ಕಾರ್ಮಿಕರು ಜಿಲ್ಲೆಯಲ್ಲಿ ನೆಲೆಸಿದ್ದು ಹಬ್ಬ ಅಥವಾ ಇನ್ನಿತರ ಕಾರ್ಯ ನಿಮಿತ್ತ ತಮ್ಮ ಊರಿಗೆ ತೆರಳಿರುವವರ ಬಗ್ಗೆ ಪರಿಶೀಲಿಸಿ ಮಾಹಿತಿ ಪಡೆದರು.

ನಂತರ ಟಾಟಾ ಸಂಸ್ಥೆಯ ವ್ಯವಸ್ಥಾಪಕರಿಗೆ ದೂರವಾಣಿ ಕರೆ ಮಾಡಿ ಕಾರ್ಮಿಕರು ಸಮೀಕ್ಷೆಯಿಂದ ಬಿಟ್ಟು ಹೋಗಿದ್ದಲ್ಲಿ ಸಿಬ್ಬಂದಿ, ಅಮ್ಮತ್ತಿ ನಾಡು ಕಚೇರಿ ಅಥವಾ ತಾಲೂಕು ತಹಸೀಲ್ದಾರ್ ಕಚೇರಿಯಲ್ಲಿ ನೋಂದಣಿ ಮಾಡಿಸುವಂತೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net