ಮಳೆ ನೀರಿನಲ್ಲಿ ಕೊಚ್ಚಿಹೋದ ಕಾರ್: ಮರವೇರಿ ಕುಳಿತ ತಹಸೀಲ್ದಾರ್!

rain
Published on

ಯಾದಗಿರಿ: ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಪ್ರಾಣ ಉಳಿಸಿಕೊಳ್ಳಲು ತಹಸೀಲ್ದಾರ್ ಪಂಡಿತ್ ಬಿರಾದಾರ ಅವರು ಮರವನ್ನೇರಿ ಕುಳಿತ ಪ್ರಸಂಗ ಬುಧವಾರ ರಾತ್ರಿ ನಡೆದಿದೆ.

ಯಾದಗಿರಿಯಿಂದ ಬೀದರ್ ಜಿಲ್ಲೆಯ ಭಾಲ್ಕಿಗೆ ಕಲಬುರಗಿ ಜಿಲ್ಲೆಯ ಚಿಂಚೋಳಿ ಮುಖಾಂತರ ಕಾರಿನಲ್ಲಿ ಹೊರಟಿದ್ದ ಇವರು ಗಣಾಪುರ ಹತ್ತಿರ ನೀರಿನಿಂದ ತುಂಬಿ ಹರಿಯುತ್ತಿರುವ ಸೇತುವೆ ದಾಟಲು ಪ್ರಯತ್ನಿಸಿದರು. ಇದನ್ನೂ ಓದಿ: 16 ಬಾರಿ ಬಂಧಿಸಿದ್ದ ಪೊಲೀಸ್​ ಅಧಿಕಾರಿಗೇ ಕಿಡ್ನಿ ಕೊಟ್ಟು ಕಾಪಾಡಿದಳು!

ಆದರೆ ನೀರಿನ ರಭಸಕ್ಕೆ ಕಾರು ಕೊಚ್ಚಿ ಹೋಯಿತು. ಹೀಗಾಗಿ ಗಾಬರಿಯಾದ ಪಂಡಿತ್ ಬಿರಾದಾರ ಪ್ರಯಾಸದಿಂದ ಮರವೊಂದನ್ನು ಹಿಡಿದು ಅದರ ಮೇಲೇರಿ ಕುಳಿತಿದ್ದಾರೆ. ಇವರನ್ನು ರಕ್ಷಿಸಲು ಮಿರಿಯಾಣ ಠಾಣೆ ಪಿಎಸ್‌ಐ ಸಂತೋಷ ರಾಠೋಡ ಸ್ಥಳಕ್ಕೆ ಧಾವಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net