

ಗುರುಪುರ: ಸಂಘ-ಸಂಸ್ಥೆಗಳು ಇದ್ದರೆ ಸಾಲದು, ಅವು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು. ಸುರತ್ಕಲ್ ತಡಂಬೈಲಿನ ವೀರಕೇಸರಿ ಸಂಸ್ಥೆ 46 ವರ್ಷಗಳಿಂದ ಸಾಂಸ್ಕೃತಿಕ, ಕ್ರೀಡೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸೇವೆಗೈಯುತ್ತಿದ್ದು, ಸಾರ್ವಜನಿಕರ ಗೌರವಕ್ಕೆ ಪಾತ್ರವಾಗಿದೆ ಎಂದು ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ ಹೇಳಿದರು.
ಸುರತ್ಕಲ್ ಮಾರಿಗುಡಿ ಬಳಿ ಆಯೋಜಿಸಲಾದ ತಡಂಬೈಲ್ ವೀರಕೇಸರಿ ಸಂಸ್ಥೆ ವಾರ್ಷಿಕೋತ್ಸವ ಸಂದರ್ಭ ನಾಟಕ ಪ್ರದರ್ಶನದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸುರತ್ಕಲ್ ಎನ್‌ಐಟಿಕೆ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ವಿಭಾಗ ಡೀನ್ ಪ್ರೊ.ಅಂಪಾರು ಚಿತ್ತರಂಜನ್ ಹೆಗ್ಡೆ, ಉದ್ಯಮಿ ರಮೇಶ್ ರಾವ್, ಸುರತ್ಕಲ್ ವ್ಯವಸಾಯ ಸೇವಾ ಸಹಕಾರಿ ಸಂಘ ಅಧ್ಯಕ್ಷ ಅಶೋಕ್ ಶೆಟ್ಟಿ ತಡಂಬೈಲ್, ಮಾಜಿ ಕಾರ್ಪೊರೇಟರ್ ಶೋಭಾ ಆರ್., ಶ್ವೇತಾ ಪೂಜಾರಿ, ಶಾಂತಾ ಎಸ್.ರಾವ್, ಸಂಸ್ಥೆ ಸಂಚಾಲಕ ಮಹಾಬಲ ಪೂಜಾರಿ ಕಡಂಬೋಡಿ, ಅಧ್ಯಕ್ಷ ಪದ್ಮನಾಭ ಕರ್ಕೇರ, ಸುಧಾಕರ ತಡಂಬೈಲ್, ಕೈಲಾಸ್ ತಡಂಬೈಲ್, ಸುಕುಮಾರ್ ತಡಂಬೈಲ್, ರಾಘವೇಂದ್ರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಅಶೋಕ್ ಶೆಟ್ಟಿ, ಪ್ರೇಮಾನಂದ ರೂಪೇಶ್ ಅವರನ್ನು ಸನ್ಮಾನಿಸಲಾಯಿತು. ಪದ್ಮನಾಭ ಕರ್ಕೇರ ಸ್ವಾಗತಿಸಿದರು. ಮನೋಜ್ ಶೆಟ್ಟಿ ಚೇಳಾರ್ ಕಾರ್ಯಕ್ರಮ ನಿರೂಪಿಸಿದರು. ರಾಮಚಂದ್ರ ಶೆಟ್ಟಿ ವಂದಿಸಿದರು.