

ಕಿನ್ನಿಗೋಳಿ: ಮೂಲ್ಕಿ ನಗರ ಪಂಚಾಯಿತಿಯ ದ್ರವ ತ್ಯಾಜ್ಯ ಘಟಕ ನಿರ್ಮಾಣಕ್ಕೆ ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಎಳತ್ತೂರು ಪದವಿನಲ್ಲಿ ಗುರುತಿಸಲಾಗಿರುವ ಜಾಗ ಪರಿಶೀಲನೆಗೆ ರಾಜ್ಯ ಹಸಿರು ಪೀಠ ಹಾಗೂ ಮಲಿನ ದ್ರವ ಶುದ್ಧೀಕರಣದ ಅಧಿಕಾರಿಗಳ ತಂಡ ಶುಕ್ರವಾರ ಸಂಜೆ ಭೇಟಿ ನೀಡಿತು. ಈ ವೇಳೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.
ಮೂಲ್ಕಿಯ ದ್ರವ ತ್ಯಾಜ್ಯ ಮತ್ತು ಘನ ತ್ಯಾಜ್ಯ ಘಟಕ ನಿರ್ಮಾಣಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗ್ರಾಮಸ್ಥರು, ಘಟಕ ನಿರ್ಮಾಣಕ್ಕೆ ತೀವ್ರ ವಿರೋಧ ಇರುವುದಾಗಿ ತಿಳಿಸಿದ್ದಾರೆ.