ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಸಂಚಾರಕ್ಕೆ ತಡೆ

17tnpnewsfile02
ಕುರುಬೂರು ಗ್ರಾಮದ ಗೇಟ್ ಬಳಿ ರೈತರು ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ಕೆ.ಜೆ ಗುರುಸ್ವಾಮಿ, ಗೌರಿಶಂಕರ್, ಕೆ.ಬಿ.ಬಸವರಾಜ್, ಕುರುಬೂರು ಪ್ರದೀಪ್ ಇದ್ದರು.
Published on

ತಿ.ನರಸೀಪುರ: ರೈತ ಮುಖಂಡರನ್ನು ಏಕಾಏಕಿ ಬಂಧಿಸಿರುವ ಪೊಲೀಸರ ಕ್ರಮ ಖಂಡಿಸಿ ತಾಲೂಕಿನ ಕುರುಬೂರು ಗ್ರಾಮದ ಗೇಟ್ ಬಳಿ ಶುಕ್ರವಾರ ರೈತರು ರಸ್ತೆ ಸಂಚಾರ ತಡೆದು ಕೆಲಕಾಲ ಪ್ರತಿಭಟನೆ ನಡೆಸಿದರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಸಂಚಾರ ತಡೆ ನಡೆಸಿದ್ದರಿಂದ ಕೊಳ್ಳೆಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಪ್ರತಿಭಟನೆ ಬಿಸಿ ಎದುರಿಸಬೇಕಾಯಿತು. ಕೊಳ್ಳೇಗಾಲದಿಂದ ಮೈಸೂರಿಗೆ ಶಾಸಕರು ತೆರಳುತ್ತಿದ್ದು, ಈ ವೇಳೆ ಎಆರ್‌ಕೆ ಕಾರು ನಿಲ್ಲಿಸಿ ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರು. ಅಲ್ಲದೆ ಕೆಲಕಾಲ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಬಳಿಕ ಪ್ರತಿಭಟನೆ ಅಂತ್ಯವಾಯಿತು.

ರೈತರು ಪ್ರತಿಭಟನೆಗೆ ಕರೆ ನೀಡಿದರೆ ಅಂತಹವರನ್ನು ಬಂಧಿಸಲಾಗುತ್ತಿದೆ. ರೈತರನ್ನು ಬಂಧಿಸಲು ಯಾರು ಸೂಚನೆ ನೀಡಿದ್ದಾರೆ ಎಂಬುದನ್ನು ತಿಳಿಸಬೇಕು. ಅಲ್ಲದೆ ಬಂಧಿತರನ್ನು ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಸಂಘದ ಮುಖಂಡರಾದ ಕುರುಬೂರು ಗೌರಿಶಂಕರ್, ಪ್ರದೀಪ್ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕೆ.ಜೆ ಗುರುಸ್ವಾಮಿ, ಕೆ.ಬಿ.ಬಸವರಾಜ್, ಶಿವಪ್ರಸಾದ್, ಮಾದೇವಪ್ಪ, ಮಹದೇವ ಪ್ರಸಾದ್, ರಾಜೇಶ್, ಮಲ್ಲೇಶ್, ಆದಿ ಬೆಟ್ಟಳ್ಳಿ ನಂಜುಂಡಸ್ವಾಮಿ, ಕರುವಟ್ಟಿ ಉಮೇಶ್, ಲೋಕೇಶ್, ಮಂಜೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net