ಆಸ್ಪತ್ರೆಯಿಂದ ಟಿ.ಎ. ಶರವಣ ಬಿಡುಗಡೆ

T A Sharavana
Published on

ಬೆಂಗಳೂರು: ಲಘು ಹೃದಯಾಘಾತದಿಂದ ಜಯದೇವ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ, ಸೋಮವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ. ಚಿಕಿತ್ಸೆ ನೀಡಿದ ವೈದ್ಯರು ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಶರವಣ, ಕಠಿಣ ಸಂದರ್ಭದಲ್ಲಿ ನನಗಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಭಗವಂತನ ಆಶೀರ್ವಾದ ಮತ್ತು ಸ್ನೇಹಿತರು, ಅಭಿಮಾನಿಗಳು, ಕುಟುಂಬದವರ ಹಾರೈಕೆ, ಪ್ರಾರ್ಥನೆ ಹಾಗು ಜಯದೇವ ಆಸ್ಪತ್ರೆಯ ವೈದ್ಯರುಗಳ ಹಾಗು ಸಿಬ್ಬಂದಿ ವರ್ಗದವರ ಆರೈಕೆಯಿಂದ ಚೇತರಿಸಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net