

ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಸಾಮೂಹಿಕ ಕಾರ್ಯಕ್ರಮ ಪ್ರಚಾರಕ್ಕಾಗಿ ನಡೆಯುತ್ತಿಲ್ಲ, ಇಂತಹ ಕಾರ್ಯಕ್ರಮದಲ್ಲಿ ವಿವಾಹ ಮಾಡಲು ಕೆಲವು ಕುಟುಂಬಸ್ಥರು ಒಪ್ಪಿಗೆ ಸೂಚಿಸದ ಕಾರಣ ಹೆಣ್ಮಕ್ಕಳು ಪ್ರಾಯ ದಾಟಿದರೂ ವಿವಾಹವಾಗದೆ ಬಾಕಿ ಉಳಿಯುತ್ತಿದ್ದಾರೆ ಎಂದು ಕರ್ನಾಟಕ ಸುನ್ನೀ ಜಂಇಯತುಲ್ ಉಲನಾ ಕಾರ್ಯದರ್ಶಿ ಹುಸೈನ್ ಸಅದಿ ಕೆ.ಸಿ.ರೋಡು ಖೇದ ವ್ಯಕ್ತಪಡಿಸಿದರು.
ಸುನ್ನೀ ಯುವಜನ ಸಂಘ ಮ್ಯಾರೇಜ್ ಸೆಲ್ ಕೆ.ಸಿ.ರೋಡು ಆಶ್ರಯದಲ್ಲಿ ಉಚ್ಚಿಲ ಖಾಸಗಿ ಸಭಾಂಗಣದಲ್ಲಿ ನಡೆದ 13ನೇ ವರ್ಷದ ಉಚಿತ ಸಾಮೂಹಿಕ ವಿವಾಹದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಮ್ಮದೇ ಊರಿನ ಬಡ ಹೆಣ್ಮಕ್ಕಳಿಗೆ ಮದುವೆ ಮಾಡಲು ಸಂಟನೆ ಯೋಚಿಸಿದ್ದರೂ ಸೂಕ್ತ ಸಮಯದಲ್ಲಿ ಹೆಣ್ಮಕ್ಕಳಿಗೆ ವರ ಸಿಗದ ಕಾರಣ ದೂರದೂರಿನ ಹೆಣ್ಮಕ್ಕಳ ಮದುವೆಗೆ ಆದ್ಯತೆ ನೀಡಲಾಗುತ್ತಿದೆ. ಆದರೂ ಸ್ಥಳೀಯ ಬಡ ಹೆಣ್ಮಕ್ಕಳ ಮದುವೆಗೆ ಆರ್ಥಿಕ ನೆರವು ಸಂಟನೆ ನೀಡುತ್ತಿದೆ ಎಂದರು.
ಶಾಝಿಯಾ -ಮಹಮ್ಮದ್ ಶರೀಫ್ ಪುದುವೆಟ್ಟು, ಆಯಿಷತ್ ಹಸೀನ - ತಾಜುದ್ದೀನ್ ಅವಾನಿ, ತಾಜುನ್ನಿಸಾಎ.ಎ. - ಅಹ್ಮದ್ ಕಬೀರ್ ಮಡಿಕೇರಿ, ಆಸಿರಾ ಬಾನು -ಶರೀಫ್ ಎಸ್.ಇಮಮಿ ಭದ್ರಾವತಿ ಜೋಡಿ ದಾಂಪತ್ಯ ಪ್ರವೇಶಿಸಿದರು.
ಕರ್ನಾಟಕ ಸುನ್ನೀ ಜಂಇಯತುಲ್ ಉಲಮಾ ಅಧ್ಯಕ್ಷ, ಖಾಜಿ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ವಾಣಿ ನಿಖಾ ನೇತೃತ್ವ ವಹಿಸಿದ್ದರು. 407 ಉಚ್ಚಿಲ ಎಸ್. ಜುಮಾ ಮಸೀದಿಯ ಮುದರ್ರಿಸ್ ಇಬ್ರಾಹಿಂ ಫೈಜಿ ಉಸ್ತಾದ್ ಕಾರ್ಯಕ್ರಮ ಉದ್ಘಾಟಿಸಿದರು. ಸಯ್ಯದ್ ಹಾಮಿದ್ ತಂಳ್ ಮುಹಿವ್ಮಾತ್ ದುವಾ ನೆರವೇರಿಸಿದರು. ಎಸ್‌ವೈಎಸ್ ಮೆರೇಜ್ ಸೆಲ್ ಅಧ್ಯಕ್ಷ ಎಂ.ಬಿ.ಮುಹಮ್ಮದ್, ಮುನೀರ್ ಸಖಾಫಿ ಅಲ್ ಫುರ್ಖಾನಿ, ಅಬ್ದುಲ್ಲಾ ಮದನಿ, ಮುಸ್ತಫಾಜುಹುರಿ, ಶಬೀರ್ ಅಶ್ಹರಿ, ಪಿ.ಐ.ಅಹ್ಮದ್ ಕುಂಞಿ, ಅಬ್ದುಲ್ ಮಜೀದ್ ಮಾಡೂರು, ಜಾಬಿರ್ ಹಿದಾಯತ್ ನಗರ, ಅಸ್ಗರ್ ತಲಪಾಡಿ, ಜಂಃ ಅಜ್ಜಿನಡ್ಕ, ಎ.ಎಂ.ಅಬ್ಬಾಸ್ ಮಜಲ್, ಹಿದಾಯತ್ ಉಚ್ಚಿಲ್, ಅಬ್ಬಾಸ್ ಉಚ್ಚಿಲ್ ಪೆರಿಬೈಲ್, ಅಬ್ದುಲ್ಲಾ ಸಿತಾರ್, ಉಸ್ಮಾನ್ ಕೆ.ಎ., ಖಾದರ್ ಮಕ್ಯಾರ್, ಅನ್ಸಾಫ್ ಗೋಲ್ಡ್ ಕಿಂಗ್, ಅಬ್ದುಲ್ ಸಲಾಂ ಉಚ್ಚಿಲ್, ಬಿ.ಎಚ್.ಇಸ್ಮಾಯಿಲ್, ಕೆ.ಇ.ಹಸೈನಾರ್, ಮೋನು ಪಂಜಾಲ, ಎಂ.ಪಿ.ಮಹಮ್ಮದ್, ಹಾಫಿಲ್ ನಝೀರ್ ಸಖಾಫಿ ತಲಪಾಡಿ, ಕೆ.ಬಿ.ಯಹ್ಯಾ, ಬಶೀರ್ ಅಹ್ಸನಿ ಪಿಲಿಕೂರು, ಅಬ್ದುಲ್ ಸಲಾಂ ನಯಪಟ್ಣ, ಅಬ್ಬಾಸ್ ಪೂಮಣ್ಣ್ ಮೊದಲಾದವರಿದ್ದರು.
ಎಸ್‌ವೈಎಸ್ ಮ್ಯಾರೇಜ್ ಸೆಲ್ ಸಂಚಾಲಕ ಎನ್.ಎಸ್.ಉಮರ್ ನಿರೂಪಿಸಿದರು.
13 ವರ್ಷಗಳಿಂದ ಸಂಟನೆ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಹೆಣ್ಮಕ್ಕಳ ಮದುವೆ ಮಾಡಿಕೊಡುವ ಕಾರ್ಯಕ್ಕಾಗಿ ಚಿನ್ನಾಭರಣ ಸಹಿತ ಇತರ ದೊಡ್ಡ ಮಟ್ಟದ ಖರ್ಚು ವೆಚ್ಚ ಭರಿಸುತ್ತಿರುವುದು ಸಣ್ಣ ಸೇವೆಯಲ್ಲ, ಇಂತಹ ಸೇವೆ ನಮ್ಮಿಂದ ಅಸಾಧ್ಯವಾದರೂ ಸಹಕಾರ ನೀಡುವ ಭಾವನೆ ಅಗತ್ಯ.
ಇಬ್ರಾಹಿಂ ಫೈಜಿ ಉಸ್ತಾದ್, ಮುದರ್ರಿಸ್, 407 ಉಚ್ಚಿಲ ಎಸ್. ಜುಮಾ ಮಸೀದಿ