ಹಳೆಯಂಗಡಿ ಗ್ರಾಪಂ ಆಡಳಿತ ಯಂತ್ರ ತಟಸ್ಥ : ಪಿಡಿಒ ನೇಮಕಕ್ಕೆ ಒತ್ತಾಯ: ಸಮಸ್ಯೆ ಬಗೆಹರಿಸಲು ಪ್ರತಿನಿಧಿಗಳ ಮೌನ ಪ್ರತಿಭಟನೆ

New Project (48)
Published on

ವಿಜಯವಾಣಿ ಸುದ್ದಿಜಾಲ ಕಿನ್ನಿಗೋಳಿ

ಹಳೆಯಂಗಡಿ ಗ್ರಾಮ ಪಂಚಾಯಿತಿಗೆ ಪಿಡಿಒ ನೇಮಕಾತಿ ಮಾಡುವಂತೆ ಆಗ್ರಹಿಸಿ ಹಳೆಯಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಹಿತ ಸದಸ್ಯರು ಕಿನ್ನಿಗೋಳಿ ಮನ್ನಬೆಟ್ಟುನಲ್ಲಿರುವ ತಾಲೂಕು ಪಂಚಾಯಿತಿ ಕಚೇರಿ ಎದುರು ಮೌನ ಪ್ರತಿಭಟನೆ ನಡೆಸಿದರು.

2023ರಿಂದ ಹಳೆಯಂಗಡಿ ಗ್ರಾಪಂನಲ್ಲಿ ಪಿಡಿಒ ಹುದ್ದೆ ಖಾಲಿ ಇದ್ದು, ಪ್ರಭಾರ ಪಿಡಿಒ ಕಳೆದ ಒಂದು ತಿಂಗಳಿನಿಂದ ರಜೆಯುಲ್ಲಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಬೇರೆ ಕಡೆಯ ಪಿಡಿಒಗಳನ್ನು ಹಾಕಿದರೂ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ ಎಂದು ಅಧ್ಯಕ್ಷ ಹಾಗೂ ಸದಸ್ಯರು ಆರೋಪಿಸಿದ್ದಾರೆ.

ಈ ಬಗ್ಗೆ ಮನವಿ ನೀಡಲು ಹೋದಾಗ ಕಾರ್ಯನಿರ್ವಹಣಾಧಿಕಾರಿ ಇಲ್ಲದ ಕಾರಣ ಅಧ್ಯಕ್ಷೆ, ಉಪಾಧ್ಯಕ್ಷೆ ಮತ್ತು ಸದಸ್ಯರು ಪಂಚಾಯಿತಿ ಮುಂದೆ ಮೌನ ಪ್ರತಿಭಟನೆ ನಡೆಸಿದರು. ಬಳಿಕ ಬಂದ ಕಾರ್ಯನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಿ, ಆದಷ್ಟು ಬೇಗ ಪಿಡಿಒ ನೇಮಕ ಮಾಡುವಂತೆ ಒತ್ತಾಯಿಸಿದರು. ಉತ್ತರಿಸಿದ ತಾಪಂ ಕಾರ್ಯನಿರ್ವಹಣಾಧಿಕಾರಿ, ಹಳೆಯಂಗಡಿ ಪಂಚಾಯಿತಿಗೆ ಯಾವ ಅಧಿಕಾರಿಗಳು ಬರಲು ಒಪ್ಪದ ಕಾರಣ ಸಮಸ್ಯೆಯಾಗಿದೆ. ಈ ಬಗ್ಗೆ ಜಿಪಂ ಸಿಇಒ ಕ್ರಮಕೈಗೊಳ್ಳಲಿದ್ದಾರೆ ಎಂದರು. ಸಮಸ್ಯೆ ಬಗೆಹರಿಯದಿದ್ದರೆ ಗುರುವಾರ ಬೃಹತ್ ಪ್ರತಿಭಟನೆ ಎಚ್ಚರಿಕೆ ನೀಡಲಾಯಿತು.

ಗ್ರಾಪಂ ಉಪಾಧ್ಯಕ್ಷೆ ಚಂದ್ರಿಕಾ ಕೋಟ್ಯಾನ್, ಸದಸ್ಯರಾದ ಅಬ್ದುಲ್ ಖಾದರ್, ವಿನೋದ್ ಕುಮಾರ್ ಕೊಳುವೈಲು, ನಾಗರಾಜ್, ಚಂದ್ರ ಕುಮಾರ್ ಸಸಿಹಿತ್ಲು, ಧನರಾಜ್ ಕೋಟ್ಯಾನ್ ಸಸಿಹಿತ್ಲು, ಸುಕೇಶ್ ಪಾವಂಜೆ, ಅಶ್ವಿನ್ ಪಾವಂಜೆ, ಜಯಂತಿ ಪಾವಂಜೆ, ಸವಿತಾ ಸಸಿಹಿತ್ಲು ಉಪಸ್ಥಿತರಿದ್ದರು.

ಹಳೆಯಂಗಡಿಗೆ ಕಾಯಂ ಅಧಿಕಾರಿ ಇಲ್ಲ. ಪಂಚಾಯಿತಿ ಕಾರ್ಯದರ್ಶಿ ಹೆಚ್ಚುವರಿ ಪಿಡಿಒ ಹುದ್ದೆಯ ಹೆಚ್ಚುವರಿ ಪ್ರಭಾರರಾಗಿರುತ್ತಾರೆ. ಇದೀಗ ಅವರು ರಜೆಯಲ್ಲಿ ತೆರಳಿದ್ದು, ಪಂಚಾಯಿತಿಯಲ್ಲಿ ಯಾವುದೇ ಕೆಲಸ ಆಗದೆ ಜನರಿಗೆ ಸಮಸ್ಯೆಯಾಗುತ್ತಿದೆ. ಪ್ರಸ್ತುತ ಪಡುಪಣಂಬೂರು ಪಿಡಿಒ ಅವರಿಗೆ ಹಳೆಯಂಗಡಿ ಪಿಡಿಒ ಪ್ರಭಾರ ನೀಡಿ ಆದೇಶವಾದರೂ ಅವರು ಪ್ರಭಾರ ಸ್ವೀಕರಿಸಿಲ್ಲ. ಗ್ರಾಮ ಸಭೆ, ವಾರ್ಡ್ ಸಭೆ ಹಾಗೂ ಅಭಿವೃದ್ಧಿ ಕೆಲಸಕ್ಕೂ ತೊಡಕ್ಕಾಗುತ್ತಿದೆ. ಪೂರ್ಣಿಮಾ, ಹಳೆಯಂಗಡಿ ಪಂಚಾಯಿತಿ ಅಧ್ಯಕ್ಷೆ https://www.vijayavani.net/award-funtion https://www.vijayavani.net/anniversary-of-badguhitlu-yuvaka-yuvati-mandal

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net