

ಬೆಂಗಳೂರು: ಕರಿಸ್ತಾ ಫೌಂಡೇಶನ್ ಮತ್ತು ಸೆನಿ ಇಂಡಿಯಾ ಹಿರಿಯ ವ್ಯಕ್ತಿಗಳ ಅಂತಾರಾಷ್ಟ್ರೀಯ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಹಿರಿಯರ ಮಾನಸಿಕ ಯೋಗೇಮ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಇಂಟರ್ನ್ಯಾಶನಲ್ ಸೆಂಟರ್ನಲ್ಲಿ ನಡೆಯಿತು. ವೈದ್ಯರು, ತರು, ಪರಿಣತರು ಭಾಗವಹಿಸಿ ವೃದ್ಧರು ಅನುಭವಿಸುವ ಮಾನಸಿಕ ಸವಾಲುಗಳು ಹಾಗೂ ಸಾಮಾಜಿಕ ಒತ್ತಡಗಳ ಕುರಿತು ಚರ್ಚಿಸಿದರು.
ಸಂವಾದದಲ್ಲಿ ಮಾಜಿ ಕ್ರಿಕೆಟಿಗ ಡಾ.ಸೈಯದ್ ಕಿರ್ಮಾನಿ ಮಾತನಾಡಿ, ಹೆತ್ತವರ ನಿಸ್ವಾರ್ಥ ಪ್ರೀತಿ, ಬೆಂಬಲವಿಲ್ಲದೆ ಯಾರೂ ಬೆಳೆಯಲು ಸಾಧ್ಯವಿಲ್ಲ. ಹಿರಿಯ ಜೀವಗಳಿಗೆ ಒಳ್ಳೆಯ ವ್ಯವಸ್ಥೆ ರೂಪಿಸುವುದು ಮಕ್ಕಳ ಕರ್ತವ್ಯ. ಪಾಲಕರಿಗೆ ಕೃತರಾಗಿರುವುದು ಮತ್ತು ಅವರು ನೆಮ್ಮದಿಯಿಂದ ಇರುವಂತೆ ನೋಡಿಕೊಳ್ಳುವುದು ಮಕ್ಕಳ ಜವಾಬ್ದಾರಿಯಾಗಿದೆ. ಹಿರಿಯರಿಗೆ ಮಾನಸಿಕ, ಭಾವನಾತ್ಮಕ ಮತ್ತು ಸಾಮಾಜಿಕ ಬೆಂಬಲ ನೀಡಬೇಕು ಎಂದರು.
ಕರಿಸ್ತಾ ಫೌಂಡೇಶನ್ನ ಮ್ಯಾನೇಜಿಂಗ್ ಟ್ರಸ್ಟಿ ಪಿ.ಅನಿಲ್ ಕುಮಾರ್ ಮಾತನಾಡಿ, ಎಲ್ಲರೂ ಒಂದಾದಾಗ ಮಾತ್ರ ಸಮಾಜದಲ್ಲಿ ಹಿರಿಯ ನಾಗರಿಕರಿಗೆ ಉತ್ತಮ ವಾತಾವರಣ ಕಲ್ಪಿಸಲು ಸಾಧ್ಯವಿದೆ. ಪ್ರಸ್ತುತ ಹಿರಿಯ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ವಿವಿಧ ಯೋಜನೆಗಳನ್ನು ರೂಪಿಸಬೇಕಾಗಿದೆ ಎಂದರು.
ಕಿಲೋರ್ಸ್ಕರ್ ಸಿಸ್ಟಮ್ಸ್ ಪ್ರೈ.ಲಿ. ಅಧ್ಯಕ್ಷೆ ಗೀತಾಂಜಲಿ ಕಿಲೋರ್ಸ್ಕರ್, ನಿಮ್ಹಾನ್ಸ್ ಸೆಂಟರ್ ಫಾರ್ ಕಾನ್ಶಿಯಸ್ನೆಸ್ನ ಸಂಶೋಧನಾ ವಿದ್ಯಾರ್ಥಿ ಡಾ.ಎಂ.ಸಾಕೇತ್, ನೈಟಿಂಗೇಲ್ಸ್ ಸೆಂಟರ್ ಫಾರ್ ಏಜಿಂಗ್ನ ಮ್ಯಾನೇಜಿಂಗ್ ಟ್ರಸ್ಟಿ ಡಾ.ಎಸ್.ರಾಧಾ ಮೂರ್ತಿ, ಕೋವೈಕೇರ್ ರಿಟೈರ್ಮೆಂಟ್ ಹೋಮ್ಸ್ನ ವ್ಯವಸ್ಥಾಪಕ ನಿರ್ದೇಶಕ ಕರ್ನಲ್ ಇತರರಿದ್ದರು.