

ಹುಣಸೂರು: ಮುಖ್ಯಮಂತ್ರಿಗಳ ಪೊಲೀಸ್ ಚಿನ್ನದ ಪದಕಕ್ಕೆ ಭಾಜನರಾಗಿರುವ ತಾಲೂಕು ಮರದೂರು ಗ್ರಾಮದ ನಿವಾಸಿ ಸೈಯದ್ ಕಬೀರ್‌ವುದ್ದೀನ್ ಅವರನ್ನು ನಗರದ ವಿ.ಪಿ.ಬೋರೆ ಅಮೀನಗರದ ನಿವಾಸಿಗಳು ಸನ್ಮಾನಿಸಿ ಅಭಿನಂದಿಸಿದರು.
ಸ್ಥಳೀಯ ಮುಖಂಡ ಇಂತಿಯಾಜ್ ಅಹ್ಮದ್ ಮಾತನಾಡಿ, ಎಚ್.ಡಿ.ಕೋಟೆ ತಾಲೂಕಿನಲ್ಲಿ ಪ್ರಸ್ತುತ ಪೊಲೀಸ್ ಪೇದೆಯಾಗಿ ಸೇವೆ ಸಲ್ಲಿಸುತ್ತಿರುವ ಕಬೀರ್‌ವುದ್ದೀನ್ ಅವರ ಅತ್ಯುತ್ತಮ ಸೇವೆಯನ್ನು ಗಮನಿಸಿ ಇತ್ತೀಚೆಗೆ ಮುಖ್ಯಮಂತ್ರಿಗಳು ಚಿನ್ನದ ಪದಕವನ್ನು ನೀಡಿ ಗೌರವಿಸಲಾಗಿದೆ. ಇದು ಹುಣಸೂರು ತಾಲೂಕಿಗೆ ಸಂದ ಹೆಮ್ಮೆಯಾಗಿದೆ. ರಾಜ್ಯ ಮತ್ತು ದೇಶಸೇವೆ ಮಾಡುವ ಮೂಲಕ ಇನ್ನಷ್ಟು ಬೆಳಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ನಿವಾಸಿಗಳಾದ ಮನ್ಸೂರ್ ಅಹ್ಮದ್, ರಿಯಾಜ್ ಅಹ್ಮದ್, ನಯಾಜ್ ಪಾಷಾ, ಅಬ್ದುಲ್ ಗಫರ್, ಶರೀಫ್, ರೋಷನ್, ಸರ್ವರ್ ಇತರರು ಇದ್ದರು.