ಇನ್ನು ಗ್ರಾಪಂ ಕರ ತುಂಬಲೂ ಸ್ವೈಪ್‌ ಮಷಿನ್‌

20KWR6
Published on

ವಿಜಯವಾಣಿ ಸುದ್ದಿಜಾಲ ಕಾರವಾರ
ಇನ್ನು ಗ್ರಾಮ ಪಂಚಾಯಿತಿಗಳಲ್ಲಿ ಆಸ್ತಿ ತೆರಿಗೆಯನ್ನು ಫಾರ್ಮ್ ತುಂಬಿ, ನಗದು ರೂಪದಲ್ಲಿ ಸ್ವೀಕರಿಸುವ ಬದಲಾಗಿದೆ. ಆ್ಯಂಡ್ರಾಯ್ಡ್ ಸ್ವೈಪ್ ಮೆಷಿನ್ ಬಳಸಿ ಆನ್‌ಲೈನ್‌ನಲ್ಲಿಯೇ ಪಾವತಿ ಮಾಡುವ ಪದ್ಧತಿ ಜಾರಿಗೆ ಬರಲಿದೆ ಎಂದು ಜಿಪಂ ಉಪ ಕಾರ್ಯದರ್ಶಿ ಡಿ.ಎಂ.ಜಕ್ಕಪ್ಪಗೋಳ ಹೇಳಿದರು.
ಜಿಪಂ ಸಭಾಭವನದಲ್ಲಿ ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ ಕಾರವಾರ ತಾಪಂ ವ್ಯಾಪ್ತಿಯ ಗ್ರಾಪಂಗಳಿಗೆ ಡಿಜಿಟಲ್ ಆಸ್ತಿ ತೆರಿಗೆ ಯಂತ್ರ ವಿತರಿಸಿ ಅವರು ಮಾತನಾಡಿದರು. ಪೋಸಾ910 ಯಂತ್ರವು ಯುಎಸ್‌ಬಿ ಟೈಪ್ ಎ' ಯಿಂದಸಿ' ಟೈಪ್ ಕೇಬಲ್, ಎಸ್‌ವಿ 2000ಎಂಎಎಚ್ ಟ್ರಾವೆಲ್ ಚಾರ್ಜರ್, 10 ಪೇಪರ್ ರೋಲ್ ಮತ್ತು ಇನ್ನಿತರ ಸಲಕರಣೆಗಳನ್ನು ಒಳಗೊಂಡಿರುತ್ತದೆ.
ಈ ಯಂತ್ರವನ್ನು ಸಿಮ್ ಕಾರ್ಡ್ ಹಾಗೂ ವೈಪೈ ಬಳಸಿಕೊಳ್ಳುವುದರ ಮೂಲಕ ಉಪಯೋಗಿಸಬಹುದಾಗಿದೆ. ಸ್ವೈಪ್, ಚಿಪ್ ಕಾರ್ಡ್ ಇನ್ಸರ್ಟ್, ಟ್ಯಾಪ್ ಕಾರ್ಡ್ ಹಾಗೂ ಕ್ಯೂಆರ್ ಕೋಡ್ ಸ್ಕ್ಯಾನ ಮಾಡುವ ಮೂಲಕ ಆಸ್ತಿ ತೆರಿಗೆ ಪಾವತಿ ಮಾಡಬಹುದು. ಪಾವತಿಗಾಗಿ ಮಾಸ್ಟರ್ ಕಾರ್ಡ್, ವಿಸಾ, ಯುಪಿಐ ಹಾಗೂ ರೂಪೇ ಕಾರ್ಡ್ಗಳನ್ನು ಬಳಸಬಹುದಾಗಿದೆ ಎಂದರು.
ಯುಪಿಐ ಪಾವತಿಸುವ ವಿಧಾನ:
ಯುಪಿಐ ಪಾವತಿಗಾಗಿ ಗ್ರಾಹಕರಿಗೆ ಮೊದಲು ತಮ್ಮ ಯುಪಿಐ ಅಪ್ಲಿಕೇಶನ್ ಮತ್ತು ಸ್ಕ್ಯಾನರ್ ಮೋಡನ್ನು ತೆರೆಯಲು ಸೂಚಿಸಬೇಕು. ಕ್ಯೂಆರ್ ಕೋಡ್ ಸ್ಕಾ÷್ಯನ್ ಮಾಡಿದ ನಂತರ ಗ್ರಾಹಕರು ಅವರ ಮೊತ್ತವನ್ನು ನಮೂದಿಸುವ ಅಗತ್ಯವಿರುವುದಿಲ್ಲ. ಅವರು ಪಾವತಿ ಆಯ್ಕೆ ಪಡೆಯುತ್ತಾರೆ. ಪಾವತಿ ಖಚಿತ ಪಡೆಸಿದ ನಂತರ ಚಾರ್ಟ್ ಸ್ಲಿಪ್‌ನ್ನು ರಚಿಸಲಾಗುತ್ತದೆ. ನಂತರ ವಹಿವಾಟಿನ ಸ್ಥಿತಿಯನ್ನು ಗಮನಿಸಿದಾಗ ಹಸಿರು ಚಿಹ್ನೆಯಲ್ಲಿದ್ದರೆ ಅದು ಯಶಸ್ವಿಯಾಗಿದೆ ಎಂದರ್ಥ. ಹೀಗೆ ಈ ಯಂತ್ರವು ತೆರಿಗೆ ಪಾವತಿಯನ್ನು ಅತ್ಯಂತ ಸುಲಭವಾಗಿಸುತ್ತದೆ ಎಂದು ಅವರು ವಿವರಿಸಿದರು. ಜಿಪಂ ಅಭಿವೃದ್ಧಿ ಶಾಖೆಯ ಸಹಾಯಕ ಕಾರ್ಯದರ್ಶಿ ಜೆ.ಆರ್. ಭಟ್ಟ, ಕಾರವಾರ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ.ಆನಂದಕುಮಾರ್ ಬಾಲಪ್ಪನವರ್ ವೇದಿಕೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net