

ಸವಣೂರ: ಇಸ್ರೋ ಸಂಸ್ಥೆಯ ಚಂದ್ರಯಾನ-3 ಉಪಗ್ರಹ ಯಶಸ್ವಿಯಾಗಿ ಚಂದ್ರನ ಮೇಲೆ ಲ್ಯಾಂಡ್ ಆಗಿರುವ ಹಿನ್ನೆಲೆಯಲ್ಲಿ ಪಟ್ಟಣದ ವ್ಯಾಪರಸ್ಥರು ಹಾಗೂ ಸಾರ್ವಜನಿಕರು ಬುಧವಾರ ರಾತ್ರಿ ತ್ರಿವರ್ಣ ಧ್ವಜ ಪ್ರದರ್ಶಿಸಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಕೈಗೊಂಡರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಸಾಲಿಮಠ, ಡಾ. ಶರಣಬಸವ ಸಾಲಿಮಠ, ಶಿವಲಿಂಗಪ್ಪ ಗಡೆಪ್ಪನವರ, ಫಕೀರಪ್ಪ ನಾಯಕಲ್, ಮಂಜುನಾಥ ಸಾತಪತಿ, ಚಂದ್ರು ಸಿದ್ದಾಪೂರ, ಆನಂದ ಶಿರಸಂಗಿ, ಮಾಂತೇಶ ಪೂಜಾರ, ಫಕೀರೇಶ ಭೋವಿ, ವಿಕಾಸ ಕಳಸದ, ಸುರೇಶ ರಸಾಳಕರ, ಬಾಬು ರಸಾಳಕರ, ಕಿರಣ ಪಾಣಿಗಟ್ಟಿ, ಚಿದಂಬರ ಸಾರತರಾಮ ಹಾಗೂ ಇತತರು ಇದ್ದರು.