29ರಂದು ಸ್ವಾಸ್ಥ್ಯ ರಸ ಆಹಾರ ಮೇಳ

Published on

ಉಳ್ಳಾಲ: ರಾಷ್ಟ್ರೀಯ ಆಯುರ್ವೇದ ದಿನದ ಅಂಗವಾಗಿ ತಲಪಾಡಿ ಶಾರದಾ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸ್ವಸ್ಥವೃತ್ತ ವಿಭಾಗ, ಜಿಲ್ಲಾ ಆಯುಷ್ ವಿಭಾಗ ಮತ್ತು ನಿತ್ಯ ಫುಡ್ಸ್ ಸಹಯೋಗದಲ್ಲಿ ಸ್ವಾಸ್ಥ್ಯ ರಸ-ಆಹಾರ ಮೇಳ ಆರೋಗ್ಯಕರವಾಗಿ ತಯಾರಿಸಿದ ಖಾದ್ಯಗಳ ಪ್ರದರ್ಶನ ಹಾಗೂ ಸ್ಪರ್ಧೆ ಅ.29ರಂದು ಶಾರದಾ ಆಯುರ್ಧಾಮ ಕ್ಯಾಂಪಸ್‌ನಲ್ಲಿ ನಡೆಯಲಿದೆ. ಮೊದಲ ಬಹುಮಾನ 3,000 ರೂ., ಎರಡನೇ ಬಹುಮಾನ 1,500 ರೂ. ಮತ್ತು ಮೂರನೇ ಬಹುಮಾನ 500 ರೂ. ನೀಡಲಾಗುತ್ತಿದ್ದು, ಹೆಚ್ಚಿನ ವಿವರಗಳಿಗೆ ಡಾ.ಶಶಾಂಕ್ ಕೆ.(ದೂ.ಸಂ.: 6361956396, 7907412069) ಅವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net