ಮೂಗೂರಲ್ಲಿ ಸ್ವರ್ಣಗೌರಿಗೆ ವಿಶೇಷ ಪೂಜೆ

IMG-20240907-WA0007
Published on

ಮೂಗೂರು: ಗ್ರಾಮದಲ್ಲಿ ಶ್ರೀ ಸ್ವರ್ಣಗೌರಿ ಅಮ್ಮನ ಪ್ರತಿಷ್ಠಾಪನೆ ಕಾರ್ಯಕ್ರಮ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.


ಗ್ರಾಮದಲ್ಲಿ ಗೌರಿಗುಡಿ ಎಂದೇ ಪ್ರಸಿದ್ಧಿ ಗಳಿಸಿ ಸುಮಾರು 90 ವರ್ಷಕ್ಕೂ ಹೆಚ್ಚು ವರ್ಷಗಳಿಂದ ಶ್ರೀ ಸ್ವರ್ಣಗೌರಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ. ಬೆಳಗ್ಗೆಯಿಂದಲೇ ವಿಶೇಷ ಪೂಜೆಯೊಂದಿಗೆ ದೇವಿಯನ್ನು ವಿವಿಧ ಬಗೆಯ ಹೂಗಳಿಂದ ಅಲಂಕರಿಸಲಾಗಿತ್ತು. ಮಹಿಳೆಯರು ದೇಗುಲಕ್ಕೆ ಆಗಮಿಸಿ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು. 9 ದಿನಗಳವರೆಗೆ ಪ್ರತಿ ದಿನ ಬೆಳಗ್ಗಿನಿಂದ ರಾತ್ರಿಯವರೆಗೆ ನಿರಂತರವಾಗಿ ಪೂಜೆ ನೆರವೇರುತ್ತವೆ. ಶ್ರೀ ಸ್ವರ್ಣಗೌರಿ ಭಕ್ತ ಮಂಡಳಿ ಹಾಗೂ ಸೇವಾರ್ಥದಾರರಿಂದ ನಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆಗೆ ವಿಶೇಷ ಪೂಜೆಗಳು ನಡೆಯಲಿವೆ. 9 ದಿನಗಳ ನಂತರ ವಿಸರ್ಜನೆ ಮಾಡಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net