ಪಠ್ಯಪರಿಷ್ಕರಣೆ ವಿವಾದ ಈಗ ಕನಕದಾಸರ ತನಕ: ಮುಖ್ಯಮಂತ್ರಿಯನ್ನು ಭೇಟಿಯಾದ ಸ್ವಾಮೀಜಿ..

CM
Published on

ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆ ವಿವಾದವೀಗ ಕನಕರ ತನಕ ತಲುಪಿದ್ದು, ಸ್ವಾಮೀಜಿಯೊಬ್ಬರು ಮುಖ್ಯಮಂತ್ರಿಯವರನ್ನು ಭೇಟಿಯಾಗಿ ತಮ್ಮ ಆಕ್ಷೇಪಣೆ ತಿಳಿಸಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಹೌದು.. ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಲೋಪವಾಗಿದೆ ಎಂದು ಹೇಳಿ ಕಾಗಿನೆಲೆ ಮಠದ ಶ್ರೀನಿರಂಜನಾನಂದಪುರಿ ಸ್ವಾಮೀಜಿ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದು, ಮನವಿ ಪತ್ರವೊಂದನ್ನು ಸಲ್ಲಿಸಿದ್ದಾರೆ.

ಒಂಬತ್ತನೇ ತರಗತಿಯ ಸಮಾಜವಿಜ್ಞಾನ ಪಾಠದಲ್ಲಿ ಈ ಹಿಂದೆ ಕನಕದಾಸರ ಕುರಿತು ಒಂದು ಪುಟದ ವಿವರಣೆ ಇತ್ತು. ಆದರೆ ಪಠ್ಯಪರಿಷ್ಕರಣೆ ಬಳಿಕ ಅದನ್ನು ಒಂದು ಸಾಲಿಗೆ ಕಡಿತಗೊಳಿಸಲಾಗಿದೆ. ಇದನ್ನು ಈ ಮೊದಲಿನಂತೆ ವಿವರವಾಗಿ ಪುನಃ ಅಳವಡಿಸುವಂತೆ ಕ್ರಮಕೈಗೊಳ್ಳಲು ಸೂಚನೆ ನೀಡಬೇಕು ಎಂಬುದಾಗಿ ಸಿಎಂ ಅವರಲ್ಲಿ ಸ್ವಾಮೀಜಿ ಮನವಿ ಮಾಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net