ಮಠದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಹಾವು ಕಡಿದು ಸ್ವಾಮೀಜಿ ಸಾವು

Swamiji
Published on

ಚಾಮರಾಜನಗರ: ಹಾವಿನ ಕಡಿತಕ್ಕೆ ಒಳಗಾಗಿ ಸ್ವಾಮೀಜಿಯೊಬ್ಬರು ಸಾವಿಗೀಡಾದ ಪ್ರಕರಣವೊಂದು ಚಾಮರಾಜನಗರದಲ್ಲಿ ನಡೆದಿದೆ. ಇಂದು ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಗೋಪಾಲಪುರದಲ್ಲಿ ಈ ಘಟನೆ ನಡೆದಿದೆ.

ಗೋಪಾಲಪುರದ ಕಬ್ಬಿಣಕೋಲೇಶ್ವರ ಮಠದ ಇಮ್ಮಡಿ ಗುರುಮಲ್ಲ ಸ್ವಾಮೀಜಿ (38) ಸಾವಿಗೀಡಾದವರು. ಇವರು ಇಂದು ಮಠದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ವಿಷಪೂರಿತ ಹಾವೊಂದು ಕಚ್ಚಿದೆ.

ದೇಹಕ್ಕೆ ವಿಷ ಸೇರಿಕೊಂಡಿದ್ದರಿಂದ ಅಸ್ವಸ್ಥಗೊಂಡ ಸ್ವಾಮೀಜಿಯನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯುವಾಗ ಅವರು ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ. ಸ್ವಾಮೀಜಿಗಳ ಅನುಯಾಯಿಗಳು, ಮಠದ ಭಕ್ತರು ಈ ಸಾವಿನಿಂದ ತೀವ್ರ ಬೇಸರಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net