ಸ್ವದೇಶಿ ದಿನಾಚರಣೆ ಸಮ್ಮೇಳನ ನ.೩೦ ರಂದು

Published on

ಕಲಬುರಗಿ : ರಾಷ್ಟಿçÃಯ ಯುವ ಸಂತ ರಾಜೀವ ದೀಕ್ಷಿತ ಅವರ ೧೪ನೇ ಪುಣ್ಯಸ್ಮರಣೋತ್ಸವ ನಿಮಿತ್ತ ನ.೩೦ ರಂದು ನಗರದ ಸೇಡಂ ರಸ್ತೆಯಲ್ಲಿರುವ ಹಿಂದಿ ಪ್ರಚಾರ ಸಭಾದಲ್ಲಿ ರಾಷ್ಟಿçÃಯ ಸ್ವದೇಶಿ ದಿನಾಚರಣೆ ಹಾಗೂ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ರಾಜೀವ ದೀಕ್ಷಿತ ವಿಚಾರ ವೇದಿಕೆ ಹಮ್ಮಿಕೊಂಡಿರುವ ಸಮ್ಮೇಳನವನ್ನು ಬೆಳಗ್ಗೆ ೧೦ ಗಂಟೆಗೆ ದ್ವಾರಪುರದ ಪರಮಾತ್ಮ ಸಂಸ್ಥಾನದ ಪೂಜ್ಯ ಪರಮಾತ್ಮಾಜಿ ಮಹಾರಾಜ ಸನ್ನಿಧಾನದಲ್ಲಿ ವಿಕಾಸ ಅಕಾಡೆಮಿ ಅಧ್ಯಕ್ಷರಾದ ಬಸವರಾಜ ಪಾಟೀಲ್ ಸೇಡಂ ಉದ್ಘಾಟಿಸುವರು.

ಮುಖ್ಯ ಅತಿಥಿಗಳಾಗಿ ನಾಂದೇಡನ ಪಾರಂಪರಿಕ ವೈದ್ಯರಾದ ವಿಷ್ಣು ಭೋಸಲೆ,ಛತ್ತಿಸಘಡದ ವ್ಯವಸ್ಥಾ ಪರಿವರ್ತನಾ ಅಭಿಯಾನ ಸಂರಕ್ಷಕ ಅಭ್ಯುದಯ ದ್ವಿವೇದಿ, ಹಿರಿಯ ನಾಗರಿಕರ ಗೌರವ ಧನ ಅಭಿಯಾನ ರಾಷ್ಟಿçÃಯ ಅಧ್ಯಕ್ಷ ವಿಜಯ ದೇಶಮುಖ ದಬಡಗಾವಕರ್ ಇತರರು ಪಾಲ್ಗೊಳ್ಳುವರು. ಅಧ್ಯಕ್ಷತೆಯನ್ನು ಅಶೋಕ ಗುರೂಜಿ ವಹಿಸುವರು. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವನಿಕರು ಸ್ವದೇಶಿ ಚಿಂತನೆಯಲ್ಲಿ ಪಾಲ್ಗೊಳ್ಳುವಂತೆ ಪ್ರಕಟಣೆ ಕೋರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net