ಕೆ-ಮಾಸ ವಿನೂತನ ಪ್ರಯತ್ನಕ್ಕೆ ಸಚಿವ ದರ್ಶನಾಪುರ ಚಾಲನೆ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಕಲಬುರಗಿ ಮಹಿಳಾ ಸ್ವ ಉದ್ಯೋಗಿಗಳ ಸೇವಾ ಕೇಂದ್ರ (ಕೆ-ಮಾಸ್) ಹೊಸದಾಗಿ ಆರಂಭಿಸುತ್ತಿರುವ ವಿನೂತನ ಸ್ವದೇಶಿ ಸಹಕಾರಿ ಮಾರುಕಟ್ಟೆಯ ಉದ್ಘಾಟನಾ ಸಮಾರಂಭವು ಸೆ.೨೪ ರಂದು ಬೆಳಗ್ಗೆ ೧೧ ಗಂಟೆಗೆ ಜರುಗಲಿದೆ ಎಂದು ಗುಲ್ಬರ್ಗ ಮಹಿಳಾ ಸೌಹಾರ್ದ ಸಹಕಾರಿ ನಿಯಮಿತ ಅಧ್ಯಕ್ಷೆ ಹಾಗೂ ಸೌಹಾರ್ದ ಸಹಕಾರಿ ರಾಜ್ಯನಿರ್ದೇಶಕಿ ಶೈಲಜಾ ತಪಲಿ ತಿಳಿಸಿದರು.
ನಗರದ ಜೇವರ್ಗಿ ರಸ್ತೆಯ ರಾಮ ಮಂದಿರ ಮುಂಭಾಗದಲ್ಲಿರುವ ವೆಂಕಟೇಶ ಯರಗೋಳ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿರುವ ಸಮಾರಂಭದಲ್ಲಿ ಮಹಿಳಾ ಸೌಹಾರ್ದ ಮತತು ಸೆಂಟರ್ ಫಾರ್ ಸೋಷಿಯಲ್ ಡೆವ್ಹಲ್ಪಮೆಂಟ್ ಸಹಯೋಗದಲ್ಲಿ ಆರಂಭಗೊಳ್ಳುತ್ತಿರುವ ಸ್ವದೇಶಿ ಸಹಕಾರಿ ಮಾರುಕಟ್ಟೆಯನ್ನು ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಉದ್ಘಾಟಿಸುವರು ಎಂದು ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ, ಸಿಂಪಿ ಸಮಾಜ ಅಧ್ಯಕ್ಷ ಗುಂಡಪ್ಪ ಜಮಶೆಟ್ಟಿ ಮೊದಲಾದವರು ಆಗಮಿಸುವರು. ಅಧ್ಯಕ್ಷತೆಯನ್ನು ಶೈಲಜಾ ತಪಲಿ ವಹಿಸುವರು.
ಮಹಿಳೆಯರ ಆರ್ಥಿಕ ಸಬಲತೆಗೆ ವಿನೂತನ ಪ್ರಯೋಗ ಮಾಡಲಾಗುತ್ತಿದೆ. ಹೆಣ್ಣು ಮಕ್ಕಳು ಉದ್ಯಮಿಗಳಾಗಿ ಉತ್ಪಾದಿಸುವ ವಸ್ತುಗಳಿಗೆ ಮಾರುಕಟ್ಟೆ ಒದಗಿಸಲು ಹೊಸ ಹೆಜ್ಜೆ ಇರಿಸಲಾಗಿದೆ. ಮಹಿಳೆಯರಲ್ಲಿ ಆತ್ಮ ವಿಶ್ವಾಸ ಮೂಡಿಸಿ ಅವರಿಗೆ ಸ್ವ ಉದ್ಯೋಗಿಯಾಗಿಸಲು ಪ್ರಯತ್ನಿಸುತ್ತಿz್ದೆÃವೆ. ಈ ನಿಟ್ಟಿನಲ್ಲಿ ಸಂಘದಲ್ಲಿ ೪೦೦ ಮಹಿಳೆಯರು ಸದಸ್ಯರಿದ್ದು, ಈಗ ೧೦ ಕೋಟಿ. ರೂ.ಸಾಲ ನೀಡಲಾಗಿದೆ. ಅಲ್ಲದೆ ಹಲವು ಸೇವಾ ಕಾರ್ಯಗಳನ್ನು ಮಾಡಲಾಗುತ್ತಿದೆ ಎಂದು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಸಹಕಾರಿ ನಿರ್ದೇಶಕರು ಇದ್ದರು.