ಎಸ್‌ವಿಎಸ್ ಪ.ಪೂ ಕಾಲೇಜು ಆರಂಭ

svs college
ವೆಂಕಟ್ರಮಣಸ್ವಾಮಿ ಟೆಂಪಲ್ ಪದವಿಪೂರ್ವ ಕಾಲೇಜು ಬಂಟ್ವಾಳ ಶುಭಾರಂಭಗೊಂಡಿತು.
Published on

ವಿಜಯವಾಣಿ ಸುದ್ದಿಜಾಲ ಬಂಟ್ವಾಳ

ವೆಂಕಟ್ರಮಣಸ್ವಾಮಿ ಟೆಂಪಲ್ ಎಜುಕೇಶನ್ ಟ್ರಸ್ಟ್ ಆಶ್ರಯದಲ್ಲಿ ಬುಧವಾರ ಪದವಿ ಪೂರ್ವ ಕಾಲೇಜು ಆರಂಭಗೊಂಡಿತು. ಎಸ್.ವಿ.ಎಸ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಆಡಳಿತ ಮಂಡಳಿ ಕೋಶಾಧಿಕಾರಿ ಬಿ.ಸುರೇಶ್ ಬಾಳಿಗ ಪ್ರಾಸ್ತಾವಿಕವಾಗಿ ಮಾತನಾಡಿದರು.

ಬಳಿಕ ಮಾತನಾಡಿ ವಿಜ್ಞಾನ ಮತ್ತು ವಾಣಿಜ್ಯ ತರಗತಿಗಳ ಸಂಯೋಜನೆಗಳನ್ನು ಒಳಗೊಂಡ ಪದವಿ ಪೂರ್ವಕಾಲೇಜು ಬಂಟ್ವಾಳದ ಕೇಂದ್ರ ಪ್ರದೇಶ ಎಸ್.ವಿ.ಎಸ್.ಟೆಂಪಲ್ ಸ್ಕೂಲ್‌ನ ಕ್ಯಾಂಪಸ್‌ನಲ್ಲಿ ಆರಂಭಗೊಂಡಿದೆ. ಪಿಯುಸಿ ವಿದ್ಯಾಭ್ಯಾಸವನ್ನು ಮುಂದುವರಿಸುವ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆ. ಉತ್ತಮ ವ್ಯವಸ್ಥೆಗಳನ್ನು ಹೊಂದಿದೆ ಎಂದರು.

ಟ್ರಸ್ಟ್ ಅಧ್ಯಕ್ಷ ಅಶೋಕ ಶೆಣೈ, ಸಂಚಾಲಕ ಭಾಮಿ ನಾಗೇಂದ್ರನಾಥ ಶೆಣೈ, ಮ್ಯಾನೇಜಿಂಗ್ ಟ್ರಸ್ಟ್‌ನ ಸದಸ್ಯರಾದ ಸೂರ್ಯನಾರಾಯಣ ಬಾಳಿಗ, ಶಿಲೆ ಮೊಕ್ತೇಸರ ಲಕ್ಷ್ಮೀನಾರಾಯಣ ಮಲ್ಯ, ಅವಿನಾಶ ಕಾಮತ್, ಬಿ.ಪ್ರಶಾಂತ ಪೈ, ಸುಬ್ರಾಯ ನಾಯಕ್, ವೆಂಕಟ್ರಮಣ ಶೆಣೈ, ಭಾಮಿ ಲಕ್ಷ್ಮಣ ಶೆಣೈ, ಪ್ರಶಾಂತ ಕಿಣಿ, ಪ್ರಕಾಶ ಕಿಣಿ, ಶಿವಾನಂದ ಬಾಳಿಗ, ಗಿರೀಶ್ ಪೈ, ವಸಂತ ಮಲ್ಯ, ಶ್ರೀನಿವಾಸ ಪೈ ಉಪಸ್ಥಿತರಿದ್ದರು.

ಅರ್ಚಕರಾದ ಮುರಳಿಧರ ಭಟ್, ವಸಂತ ಭಟ್, ಅಚ್ಯುತ ಭಟ್ ವೈದಿಕ ಪ್ರಾರ್ಥನೆಯೊಂದಿಗೆ ಸರಸ್ವತಿ ಪೂಜೆ ನೆರವೇರಿಸಿದರು. ಸಂಸ್ಥೆಯ ಉಪನ್ಯಾಸಕರು, ಸಿಬ್ಬಂದಿ ಮತ್ತು ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ನೂತನ ಕಾಲೇಜಿನ ಪ್ರಾಂಶುಪಾಲ ಕೆ.ಎನ್.ಗಂಗಾಧರ ಆಳ್ವ ಸ್ವಾಗತಿಸಿ ಪರಿಚಯಿಸಿದರು. ಉಪನ್ಯಾಸಕ ವೆಂಕಟೇಶ ನಾಯಕ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net