ವಿದ್ಯಾರಶ್ಮಿಯಲ್ಲಿ ಮನೋವಿಶ್ಲೇಷಣಾ ಕಾರ್ಯಾಗಾರ

workshop..
ಪುರುಷರಕಟ್ಟೆಯ ಪ್ರಸಾದಿನೀ ಆಯುರ್ವೇದ ಕ್ಲಿನಿಕ್‌ನ ವೈದ್ಯ ಡಾ.ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಅವರನ್ನು ಗೌರವಿಸಲಾಯಿತು.
Published on

ಕಡಬ: ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಹದಿಹರೆಯದ ಮತ್ತು ಮಾನಸಿಕ ಗೊಂದಲಗಳ ನಿವಾರಣೆಗಾಗಿ ಮನೋವಿಶ್ಲೇಷಣಾ ಕಾರ್ಯಾಗಾರ ಇತ್ತೀಚೆಗೆ ನಡೆಯಿತು.

ಸಭಾಧ್ಯಕ್ಷತೆ ವಹಿಸಿದ್ದ ಆಡಳಿತಾಧಿಕಾರಿ ಅಶ್ವಿನ್ ಎಲ್.ಶೆಟ್ಟಿ ಕಾರ್ಯಾಗಾರದ ಉಪಯುಕ್ತತೆಗಳ ಬಗ್ಗೆ ವಿವರಿಸಿದರು.
ಪುರುಷರಕಟ್ಟೆಯ ಪ್ರಸಾದಿನೀ ಆಯುರ್ವೇದ ಕ್ಲಿನಿಕ್‌ನ ವೈದ್ಯ ಡಾ.ರಾಘವೇಂದ್ರ ಪ್ರಸಾದ್ ಬಂಗಾರಡ್ಕ, ಮನೋವಿಶ್ಲೇಷಣಾ ತಜ್ಞೆ ’ನೆಮ್ಮದಿ’ ಮನೋಚಿಕಿತ್ಸಾ ಕೇಂದ್ರದ ಶ್ರದ್ಧಾ ರೈ ಉಪಸ್ಥಿತರಿದ್ದರು.

ವಿದ್ಯಾರಶ್ಮಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸೀತಾರಾಮ ಕೇವಳ ಪ್ರಸ್ತಾವಿಸಿ ಸ್ವಾಗತಿಸಿದರು. ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲೆ ಶಶಿಕಲಾ ಎನ್ ಆಳ್ವ ವಂದಿಸಿದರು .

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net