ಮಂದಾರಗಿರಿಯಲ್ಲಿ ಚುನಾವಣಾ ಪರ್ವ, ದೇಶದ ಗರ್ವ

Mata_Jagruti
Published on

ತುಮಕೂರು: ಜಿಲ್ಲಾಡಳಿತ, ಜಿಲ್ಲಾಸ್ವೀಪ್ ಸಮಿತಿ ವತಿಯಿಂದ ಮಂದಾರಗಿರಿ ಬೆಟ್ಟದಲ್ಲಿ ಮಂಗಳವಾರ ಯುವ ಮತದಾರರಲ್ಲಿ ಮತದಾನದ ಜಾಗೃತಿ ಮೂಡಿಸುವು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮಕ್ಕೆ ಆಗಮಿಸಿದ ಮತದಾರರಿಗೆ ಗುಲಾಬಿ ಹೊ ನೀಡಿ ಸ್ವಾಗತಿಸಿ ಮಾತನಾಡಿದ ಜಿಪಂ ಸಿಇಒ ಜಿ.ಪ್ರಭು, ಜಿಲ್ಲೆಯಲ್ಲಿ 45000 ಯುವಕರು ಪ್ರಥಮ ಬಾರಿಗೆ ಮತದಾನ ಮಾಡುತ್ತಿದ್ದು ಮತದಾನದ ಈ ಕ್ಷಣಗಳು ಅವಿಸ್ಮರಣೀಯ ನೆನಪಾಗಿರಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪ್ರಜಾಪ್ರಭುತ್ವದ ಈ ಹಬ್ಬದಲ್ಲಿ ಯುವಕರು ಅತ್ಯಂತ ಉತ್ಸುಕರಾಗಿ ಭಾಗವಹಿಸಬೇಕು ಶೇ.100 ರಷ್ಟು ಮತದಾನ ಮಾಡಬೇಕು ಎಂದು ಮನವಿ ಮಾಡಿದರು.

ಪ್ರಜಾಪ್ರಭುತ್ವದಿಂದ ರೆಕ್ಕೆ ಬಂದಿವೆ, ಮತ ಚಲಾಯಿಸಿ ಹಕ್ಕಿಯಂತೆ ಹಾರುವೆ. ನಾವು ನವಿಲುಗಳು ಮತದಾನ ನಮ್ಮ ಗರಿಗಳು. ಕಡ್ಡಾಯವಾಗಿ ಮಾಡುವೆವು ಮತದಾನ, ಇದು ಯುವ ಮತದಾರರ ವಾಗ್ದಾನ ಎಂಬ ಘೋಷ ವಾಕ್ಯಗಳೊಂದಿಗೆ ಯುವ ಮತದಾರರು ಭಾಗವಹಿಸಿದ್ದರು.

ವಿವಿಧ ಇಲಾಖೆ ಅಧಿಕಾರಿಗಳಾದ ಸಣ್ಣಮಸಿಯಪ್ಪ, ಅಶೋಕ್, ಶಾರದಮ್ಮ, ತೇಜೋವತಿ ಸುಮನಾ, ರೋಷನ್, ರಾಜಶೇಖರ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net