ಮೋದಿ ನೇತೃತ್ವದಲ್ಲಿ ಭಾರತದಲ್ಲಿ ಸುಸ್ಥಿರ ಪ್ರಗತಿ

2
Published on

» ನಿರ್ಮಲಾ ಸೀತಾರಾಮನ್ ಹೇಳಿಕೆ ಬ್ಯಾಟರಾಯನಪುರ ಕ್ಷೇತ್ರದ ಜಕ್ಕೂರು

» ಬ್ಯಾಟರಾಯನಪುರದಲ್ಲಿ ತಮ್ಮೇಶ್‌ಗೌಡ ಪರ ಮತಯಾಚನೆ

ಬ್ಯಾಟರಾಯನಪುರ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಸುಸ್ಥಿರವಾಗಿದ್ದು, ಪ್ರಗತಿಪಥದಲ್ಲಿ ಸಾಗುತ್ತಿದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ವಾರ್ಡ್ ವ್ಯಾಪ್ತಿಯ ಭಾರ್ತೀಯ ಸಿಟಿ ನಿವಾಸಿಗಳೊಂದಿಗೆ ಗುರುವಾರ ಸಂವಾದ ನಡೆಸಿದರು. ಕ್ಷೇತ್ರದ ಅಭ್ಯರ್ಥಿ ಎಚ್.ಸಿ. ತಮ್ಮೇಶ್‌ಗೌಡ ಗೆಲುವಿಗೆ ಬೆಂಬಲಿಸುವಂತೆ ಮನವಿ ಮಾಡಿದರು. ದೇಶ ಸುಭದ್ರವಾಗಿ, ಸುವ್ಯವಸ್ಥಿತವಾಗಿ ಅಭಿವೃದ್ಧಿ ಕಾರ್ಯಗಳ ಮೂಲಕ ಜಾಗತಿಕ ಮಟ್ಟದಲ್ಲಿ ಮುನ್ನುಗ್ಗುತ್ತಿದೆ. ಪ್ರತಿ ರಾಜ್ಯಗಳ ಸರ್ವಾಂಗೀಣ ಪ್ರಗತಿ ನಮ್ಮ ಸರ್ಕಾರದ ಆದ್ಯತೆಯಾಗಿದ್ದು, ಈ ನಿಟ್ಟಿನಲ್ಲಿ ದಾಪುಗಾಲಿಡುತ್ತಿದ್ದೇವೆ ಎಂದರು.

ಪ್ರಗತಿಪರ ಆಡಳಿತಕ್ಕೆ ಬೆಂಬಲವಿರಲಿ: ದೇಶವು ಆರ್ಥಿಕ ಪ್ರಗತಿ, ಮಾನವ ಸಂಪನ್ಮೂಲ ಕ್ಷೇತ್ರದಲ್ಲಿ ಚೀನಾವನ್ನು ಹಿಂದಿಕ್ಕಿದೆ. ಮೋದಿ ಆಡಳಿತವನ್ನು ದೇಶದ ಎಲ್ಲ ರಾಜ್ಯಗಳು ಬೆಂಬಲಿಸುತ್ತಿದ್ದು, ಕಳೆದ ಹಲವು ಇದು ಚುನಾವಣೆಗಳಲ್ಲಿ ನಿರೂಪಿತವಾಗಿದೆ. ಇಂತಹ ಪ್ರಗತಿಪರ ಆಡಳಿತಕ್ಕೆ ಕ್ಷೇತ್ರದ ಅಭ್ಯರ್ಥಿ ತಮ್ಮೇಶ್ ಗೌಡ ಅವರನ್ನು ವಿಧಾನಸೌಧಕ್ಕೆ ಕಳುಹಿಸಿಕೊಡಲು ನೀವೆಲ್ಲ ಒಮ್ಮತದಿಂದ ಅವರನ್ನು ಗೆಲ್ಲಿಸಬೇಕು ಎಂದು ಕೋರಿದರು. ಸಂವಾದದಲ್ಲಿ ಸಾರ್ವಜನಿಕರು ಸಚಿವೆ ನಿರ್ಮಲಾ ಸೀತಾರಾಮನ್‌ಗೆ ದೇಶದ ಆರ್ಥಿಕ ಸ್ಥಿತಿಗತಿ, ಕೇಂದ್ರ ಸರ್ಕಾರದ ಭವಿಷ್ಯದ ಯೋಜನೆಗಳು ಸೇರಿ ಹಲವು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದರು.

ಭರವಸೆ ಮೂಡಿಸುವ ನಾಯಕ

ಮಾದರಿ ಬ್ಯಾಟರಾಯನಪುರ ಕ್ಷೇತ್ರ ನಿರ್ಮಾಣದ ಗುರಿ ನನ್ನದಾಗಿದಜೆ. ಈ ಗುರಿ ಸಾಕಾರಗೊಳ್ಳಲು ನಿಮ್ಮ ಬೆಂಬಲದ ಅಗತ್ಯವಿದೆ. ನಾನು ಭರವಸೆ ನೀಡುವ ನಾಯಕನಲ್ಲ, ಭರವಸೆ ಮೂಡಿಸುವ ನಾಯಕ. ಕ್ಷೇತ್ರದಲ್ಲಿ ಈ ಬಾರಿ ಕಮಲ ಅರಳಿಸುವ ಹೊಣೆ ಹೊತ್ತಿದ್ದು, ನಿಮ್ಮೆಲ್ಲರ ಕನಸಿನ ಮತ್ತು ಅಭಿವೃದ್ಧಿ ಪೂರ್ಣ ಬ್ಯಾಟರಾಯನಪುರ ನಿರ್ಮಾಣಕ್ಕೆ ನನ್ನನ್ನು ಬೆಂಬಲಿಸಿ. ನಿಮ್ಮವ್ಯಾಪ್ತಿಯ ಅಭಿವೃದ್ಧಿಯ ಕಾಳಜಿಯನ್ನು ನನಗೆ ಬಿಡಿ ಎಂದು ಬಿಜೆಪಿ ಅಭ್ಯರ್ಥಿ ತಮ್ಮೇಶ್‌ಗೌಡ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net