

ಕೈಲಾಂಚ
ಹೋಬಳಿಯ ಹುಣಸನಹಳ್ಳಿ ಗ್ರಾಪಂನ ಹನುಮಂತೇಗೌಡನದೊಡ್ಡಿ ರೈತರ ಮೂರು ಹಸುಗಳು ಇದ್ದಕ್ಕಿದ್ದಂತೆ ಅನುಮಾನಾಸ್ಪದವಾಗಿ ಮೃತಪಟ್ಟಿವೆ.
ಪುಟ್ಟರಾಮಯ್ಯ ಮೂರು ಮಿಶ್ರತಳಿ ಹಸು ಜತೆಗೆ ಕುರಿ ಮೇಕೆ ಸಾಕಿದ್ದರು. ಗುರುವಾರ ಮಧ್ಯಾಹ್ನ ಹಸುಗಳನ್ನು ಗ್ರಾಮದ ಪಕ್ಕದ ಅರಣ್ಯ ಪ್ರದೇಶದಲ್ಲಿ ಮೇಯಲು ಬಿಟ್ಟಿದ್ದರು. ಸಂಜೆ ಮನೆಗೆ ಕರೆತಂದು ಹಸುಗಳಿಗೆ ತಿಂಡಿ, ನೀರು ನೀಡಿ, ಹಾಲು ಕರೆಯಲು ಮುಂದಾಗಿದ್ದರು. ಈ ವೇಳೆ ಒಂದು ಹಸು ಹಾಲು ಕರೆಯುವ ಸಮಯದಲ್ಲಿ ಇದ್ದಕ್ಕಿದ್ದಂತೆ ಒದ್ದಾಡಿ ಪ್ರಾಣ ಬಿಟ್ಟಿದೆ. ಇದಾದ ಕೆಲವೇ ನಿಮಿಷದಲ್ಲಿ ಮತ್ತೆರಡು ಹಸುಗಳು ಅದೇ ರೀತಿ ಒದ್ದಾಡಿ ಪ್ರಾಣ ಬಿಟ್ಟಿವೆ.
ವಿಷಯ ತಿಳಿದ ರಾಮನಗರ ಪಶುಪಾಲನಾ ಇಲಾಖೆ ಉಪ ನಿರ್ದೇಶಕ (ಆಡಳಿತ) ಡಾ. ಅಸಾದುಲ್ಲಾ ಷರೀಫ್, ಕೈಲಾಂಚ ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಹರೀಶ್, ಬಮುಲ್ ಉಪವ್ಯವಸ್ಥಾಪಕ ಡಾ. ಗಣೇಶ್ ಭೇಟಿ ನೀಡಿ ಹಸುಗಳ ಮರಣೋತ್ತರ ಪರೀೆ ನಡೆಸಿ, ನಂತರ ಹಸುಗಳನ್ನು ಭೂಮಿಯಲ್ಲಿ ಹೂಳಿಸಿದರು.
ಹಸುಗಳ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆಹಾರ ವ್ಯತ್ಯಾಸ, ವಿಷಪೂರಿತ ಮೇವಿನಿಂದ ಮೃತಪಟ್ಟಿರಬಹುದು. ಹಸುಗಳಿಗೆ ನೀಡಿದ್ದ ತಿಂಡಿ, ಮೇವನ್ನು ಬೆಂಗಳೂರಿನ ಹೆಬ್ಬಾಳದಲ್ಲಿರುವ ಪ್ರಯೋಗಾಲಯಕ್ಕೆ ಕಳಿಸಲಾಗುತ್ತದೆ. ವರದಿ ಬಂದ ನಂತರವೇ ಕಾರಣ ತಿಳಿಯಲಿದೆ.
> ಡಾ.ಜಿ.ಟಿ. ಗಣೇಶ್, ಉಪವ್ಯವಸ್ಥಾಪಕ, ಬಮುಲ್.