ಅಮಾನತು ಆದೇಶ ಹಿಂಪಡೆದ ಬಿಬಿಎಂಪಿ

bbmp
Published on

ಬೆಂಗಳೂರು: ಸಾಮಾನ್ಯವಾಗಿ ಯಾವುದೇ ಸರ್ವೇಗಳಾದರೂ ಪರಿಪೂರ್ಣ ಎಂದಿರುವುದಿಲ್ಲ. ಸರ್ಕಾರ ಪರಿಶಿಷ್ಟ ಜಾತಿ ಸಮೀಕ್ಷೆ ನೆಪದಲ್ಲಿ ಒಳಮೀಸಲಾತಿ ಘೋಷಣೆಯನ್ನು ಮುಂದೂಡುತ್ತಿದ್ದು, ಇದರಿಂದ ಅದೆಷ್ಟೋ ಮಂದಿಗೆ ಪ್ರಾಯದ ಪರಿದೆಯಲ್ಲಿ ಸರ್ಕಾರಿ ಹುದ್ದೆಗಳು ನಷ್ಟವಾಗುವ ಸಾಧ್ಯತೆ ಇದೆ ಎಂದು ವ್ಯಾಪಕ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಸರ್ಕಾರಿ ಹುದ್ದೆಯಲ್ಲಿದ್ದು, ಕರ್ತವ್ಯಲೋಪ ಕಾರಣದಿಂದ ಅಮಾನತ್ತುಗೊಂಡರೂ ಒತ್ತಡದ ಮೂಲಕ ಮತ್ತೆ ಅಧಿಕಾರ ಭದ್ರಪಡಿಸಿಕೊಳ್ಳುವ ಸ್ಥಿತಿ ಇದ್ದು, ಸಾರ್ವಜನಿಕ ಹಿತಾಸಕ್ತಿಯತ್ತ ಮುಖಮಾಡುವವರೇ ಇಲ್ಲವಾಗಿದ್ದಾರೆ. ನಾಗಮೋಹನ್​ ದಾಸ್​ ನೇತೃತ್ವದ ಪರಿಶಿಷ್ಟ ಜಾತಿ, ಮೂಲ ಜಾತಿ ಸಮಗ್ರ ಸಮೀೆ ಪ್ರಕ್ರಿಯೆಯಲ್ಲಿ ಕರ್ತವ್ಯಲೋಪ ನಡೆಸಿದ್ದ ಎಂಟು ಅಧಿಕಾರಿಗಳನ್ನು ಇತ್ತೀಚೆಗೆ ಅಮಾನತು ಗೊಳಿಸಲಾಗಿತ್ತು. ಇದೀಗ ಅಮಾನತು ತೆರವುಗೊಳಿಸಿ ಬಿಬಿಎಂಪಿ ಆದೇಶ ಹೊರಡಿಸಿದೆ.

ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕೇಂದ್ರ ಕಚೇರಿಯಲ್ಲಿ ಬುಧವಾರ ನಡೆದ ಬಿಬಿಎಂಪಿ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ನೌಕರರಿಗೆ ವಿವಿಧ ಭರವಸೆಯನ್ನು ನೀಡಿದ ಬಿಬಿಎಂಪಿಯ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್​, ಪರಿಶಿಷ್ಟ ಜಾತಿ, ಮೂಲ ಜಾತಿ ಸಮಗ್ರ ಸಮೀಕ್ಷೆ ಕರ್ತವ್ಯಲೋಪ ಪ್ರಕರಣದಲ್ಲಿ ಅಮಾನತುಗೊಂಡ ಬಿಬಿಎಂಪಿ ನೌಕರರನ್ನು ವಾಪಸ್​ ತೆಗೆಯುವುದಾಗಿ ಭರವಸೆ ನೀಡಿದ್ದರು. ಇದೀಗ ಅಮಾನತು ಆದೇಶವನ್ನು ತೆರವುಗೊಳಿಸಿ, 5 ಮಂದಿಯನ್ನು ಹಾಲಿ ಜೀವನಾಧಾರ ಭತ್ಯೆ ಪಡೆಯುತ್ತಿರುವ ಕಚೇರಿಯಲ್ಲಿ ಕಾರ್ಯನಿರ್ವಹಿಸಲು, ಮೂವರನ್ನು ಸದರಿ ನೌಕರರು ಸಮಾನ್ಯ ವರ್ಗಾವಣೆ ಪ್ರಕ್ರಿಯೆಯಲ್ಲಿ ನಿಯೋಜಿಸಿರುವ ಸ್ಥಳದಲ್ಲಿ ವರದಿ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ.

ಈ ಸಮೀಕ್ಷೆ ಮೇ 5ರಂದು ಪ್ರಾರಂಭಗೊಂಡಿದ್ದು, ಮೇ 17ರಂದು 1ನೇ ಹಂತ ಪೂರ್ತಿಗೊಳಿಸಿದಾಗ ಶೇ.23 ಅಷ್ಟೇ ಗುರಿ ಸಾಧಿಸಿತ್ತು. 2011 ಸಮೀೆಯ ಪ್ರಕಾರ 9 ಲಕ್ಷ ಪರಿಶಿಷ್ಟ ಜಾತಿಯ ಮಂದಿ ವಾಸಿಸುತ್ತಿರುವುದಾಗಿ ವರದಿಯಾಗಿದ್ದು, ಈ ಬಾರಿ ಸಮೀೆಯ ನಂತರ ಅಂದಾಜು ಸಂಖ್ಯೆ 15&16 ಲಕ್ಷಕ್ಕೆ ಏರಿಕೆ ಕಾಣುವ ನಿರೀೆಕ್ಷೆ ಇತ್ತು. ಆದರೆ, ಸಮೀೆಗಳು ಬಿಬಿಎಂಪಿಯ 9 ಜೋನ್​ಗಳಲ್ಲಿ 28 ಕ್ಷೇತ್ರವಾರು ಸರಿಯಾಗಿ ನಡೆಯದೆ ಇರುವುದರಿಂದ ಶೇ.50 ಸಮೀೆ ಪೂರ್ತಿಗೊಂಡಾಗಲೇ ನಿಖರವಾದ ಲಿತಾಂಶ ಕಾಣುವಲ್ಲಿ ವಿಲವಾಗಿದೆ. ಇನ್ನೂ ಸಮೀೆ ಪೂರ್ಣ ಪ್ರಮಾಣದಲ್ಲಿ ನಡೆಯದೆ ಇರುವುದಕ್ಕೆ ಅಧಿಕಾರಿಗಳ ರ್ನಿಲಕ್ಷ$್ಯವೂ ಕಾರಣ ಎನ್ನಲಾಗುತ್ತಿದೆ.

ಸಮೀಕ್ಷೆ  ಪೂರ್ಣಗೊಳ್ಳುವುದು ಯಾವಾಗ?

ಇತ್ತೀಚೆಗೆ ನಗರದ ವಿವಿಧೆಡೆ ಮನೆಗಳ ಮುಂಭಾಗದಲ್ಲಿ "ಈ ಮನೆಯ ಸಮೀಕ್ಷೆ ಪೂರ್ಣಗೊಳಿಸಲಾಗಿದೆ' ಎಂಬ ಸ್ಟಿಕ್ಕರ್​ಗಳು ಪ್ರತ್ಯಕ್ಷ$ವಾದಾಗ ಜನರು ಸಮೀೆಯ ಕುರಿತಾಗಿ ಅಪಸ್ವರಗಳನ್ನು ಎತ್ತಲು ಪ್ರಾರಂಭಿಸಿದ್ದರು. ಈ ಹಿನ್ನೆಲೆಯಲ್ಲಿ ಅಮಾನತು ನಡೆದಿತ್ತು. ಸ್ಟಿಕರ್​ನ ಮೇಲೆ ಬರೆದಿರುವ ಸಹಾಯವಾಣಿ ಆಗಲಿ ಕ್ಯೂಆರ್​ ಕೋಡ್​ ಆಗಲಿ ಯಾವುದರಲ್ಲೂ ಸರಿಯಾದ ಪ್ರತಿಕ್ರಿಯೆ ಸಿಗುತ್ತಿಲ್ಲ ಎಂಬುದು ಹಲವರ ಆರೋಪವಾಗಿತ್ತು. ಆದಾಗಲೇ ಸಮೀೆಯ ಕಾರ್ಯವಿಧಾನ, ಸಂಬಂಧಪಟ್ಟವರ ಪ್ರತಿಕ್ರಿಯೆ, ಸಮೀೆಯ ಉದ್ದೇಶದ ಬಗ್ಗೆ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಮೀೆಯಲ್ಲಿ ಇದುವರೆಗೆ ಬಿಬಿಎಂಪಿ ಹಲವು ಬಾರಿ ಎಡವಿದ್ದು, ಸಮೀೆಯನ್ನು ಯಾವಾಗ ಪೂರ್ಣಗೊಳಿಸುತ್ತಾರೆ ಎಂಬುದೇ ಜನರ ಪ್ರಮುಖ ಪ್ರಶ್ನೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net