ಪ್ರವಾಸದಲ್ಲಿ ಅನುಚಿತವಾಗಿ ವರ್ತಿಸಿದವರ ಅಮಾನತು

FotoJet (1)
Published on

ರೂರಲ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಚ್.ಕೆ. ಶ್ರೀಕಂಠು ಹೇಳಿಕೆ


ಕನಕಪುರ :
ನಗರದ ಪ್ರತಿಷ್ಠಿತ ರೂರಲ್ ವಿದ್ಯಾ ಸಂಸ್ಥೆಯಿಂದ ಉಪನ್ಯಾಕರು ಮತ್ತು ವಿದ್ಯಾರ್ಥಿಗಳು ಪ್ರವಾಸಕ್ಕೆ ತೆರಳಿದ್ದ ವೇಳೆ ಮದ್ಯಪಾನ ಮಾಡಿ ವಿದ್ಯಾರ್ಥಿಗಳ ಜತೆ ನೃತ್ಯ ಮಾಡಿ ಸಂಸ್ಥೆಗೆ ಕೆಟ್ಟ ಹೆಸರು ಬರಲು ಷಡ್ಯಂತ್ರ ರೂಪಿಸಿದ ಉಪನ್ಯಾಸಕರನ್ನು ಅಮಾನತು ಮಾಡಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಚ್.ಕೆ. ಶ್ರೀಕಂಠು ತಿಳಿಸಿದರು.
ನಗರದ ಪದವಿ ಕಾಲೇಜು ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉಪನ್ಯಾಸಕ ಆರ್.ಲಕ್ಷ್ಮೀಶ್, ಸಿ.ಎಸ್.ವಿಶ್ವನಾಥ್, ಕಾಲೇಜಿನ ಪ್ರವಾಸದ ಉಸ್ತುವಾರಿ ಸಂಚಾಲಕ ನಾಗೇಶ್ ಅವರನ್ನು ಅಮಾನತು ಮಾಡಲಾಗಿದೆ ಎಂದರು.
ಅ. 5 ರಿಂದ 10ರ ವರೆಗೆ ಪದವು ಪೂರ್ವ ವಿದ್ಯಾರ್ಥಿಗಳಿಗೆ ಪ್ರವಾಸ ಹಮ್ಮಿಕೊಳ್ಳಲಾಗಿತ್ತು. ಪ್ರವಾಸ ಮುಗಿಸಿ ವಾಪಸ್ ತೆರಳುವಾಗ ಮಡಿಕೇರಿ ವಸತಿಗೃಹದ ಬಳಿ ಉಪನ್ಯಾಸಕರು ಕುಡಿದು ವಿದ್ಯಾರ್ಥಿಗಳ ಜತೆ ತೂರಾಡಿದ ದೃಶ್ಯಗಳು ಕಂಡು ಬಂದ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ. ಪ್ರವಾಸಕ್ಕೆ ಹೊರಡುವ ಮುನ್ನಾ ದಿನ ನಮ್ಮ ಸಂಸ್ಥೆಯಲ್ಲಿ ವರ್ಗಾವಣೆಗೊಂಡ ಕೆಲ ಶಿಕ್ಷಕರು ಖಾಸಗಿ ಹೋಟೆಲ್‌ನಲ್ಲಿ ಸಭೆ ಸೇರಿ ಸಂಚು ರೂಪಿಸಿದ ಘಟನೆಗೆ ಸಂಬಂಧಿಸಿದ ಆರೋಪದ ಉಪನ್ಯಾಸಕ ನೌಕರ ಮಂಜುನಾಥ್ ಎಂಬಾತನನ್ನೂ ಅಮಾನತುಗೊಳಿಸಲಾಗಿದೆ ಎಂದರು.
ಶೈಕ್ಷಣಿಕ ಪ್ರಗತಿಯೇ ಇಲ್ಲದ ವೇಳೆ ಗಾಂಧಿವಾದಿ ಎಸ್.ಕರಿಯಪ್ಪ ಸ್ಥಾಪಿಸಿದ ರೂರಲ್ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಜನೆ ಮಾಡುವ ಮಕ್ಕಳಿಗೆ ಕೆಟ್ಟ ಹಾದಿಯನ್ನು ಉಪನ್ಯಾಸಕರು ತೋರಿಸಿದ್ದಾರೆ. ಇದಕ್ಕಾಗಿಯೇ ಸತ್ಯಶೋಧನಾ ಸಮಿತಿ ರಚಿಸಿ ವಿಚಾರಣೆ ನಡೆಸಿ ಕಾಲೇಜು ಶಿಕ್ಷಣ ಇಲಾಖೆ ಹಾಗೂ ಸಾರ್ವನಿಕರಿಗೆ ಸ್ಪಷ್ಟ ಮಾಹಿತಿ ನೀಡಲು ಪ್ರಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು.
ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಕೆಲವರು ವಿದ್ಯಾರ್ಥಿಗಳ ಹೆಸರಿನಲ್ಲಿ ದೂರು ಸಲ್ಲಿಸುವ ಮೂಲಕ ಸಂಸ್ಥೆಗೆ ದ್ರೋಹವೆಸಗಿದ್ದಾರೆ ಎಂದರು.
ಉಪನ್ಯಾಸಕರಾದ ಕೆಂಪೇಗೌಡ, ಜಯಂತ್ ಕುಮಾರ್, ಮಧು, ಕವಿತಾ, ಸುಷ್ಮ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net