ಪಿಡಿಓಗಳ ವರ್ಗಾವಣೆ ಸಿಇಓ ಆದೇಶಕ್ಕೆ ತಡೆ

Published on

ರಾಮನಗರ: ಸರ್ಕಾರದ ಗಮನಕ್ಕೆ ತರದೆ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿಗಳ ಪಿಡಿಓಗಳು ಮತ್ತು ಗ್ರೇಡ್​ 1 ಕಾರ್ಯದರ್ಶಿಗಳನ್ನು ವಿವಿಧ ಗ್ರಾಮಗಳಿಗೆ ನಿಯೋಜನೆ ಮಾಡಿದ್ದ ರಾಮನಗರ ಜಿಲ್ಲಾ ಪಂಚಾಯತಿಯ ಸಿಇಓ ಆದೇಶವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಇಲಾಖೆ ತಡೆಯೊಡ್ಡಿದೆ.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಅವರ ಸೂಚನೆ ಮೇರೆಗೆ ಚನ್ನಪಟ್ಟಣ ತಾಲೂಕಿನಲ್ಲೇ 9 ಪಿಡಿಒಗಳು ಹಾಗೂ ಇಬ್ಬರು ಗ್ರೇಡ್​&1 ಕಾರ್ಯದರ್ಶಿಗಳು. ಕನಕಪುರ ತಾಲೂಕಿನಲ್ಲಿ 4 ಪಿಡಿಒ ಮತ್ತು 4 ಕಾರ್ಯದರ್ಶಿಗಳು ಹಾಗೂ ರಾಮನಗರ ತಾಲೂಕಿನ ಒಬ್ಬ ಪಿಡಿಒ ಅನ್ನು ಬೇರೆಡೆಗೆ ನಿಯೋಜಿಸಿ, ಜಿಲ್ಲಾ ಪಂಚಾಯತಿ ಸಿಇಓ ದಿಗ್ವಿಜಯ್​ ಬೋಡ್ಕೆ ಆ.7ರಂದು ಆದೇಶ ಹೊರಡಿಸಿದ್ದರು.

ಆದರೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಇಲಾಕೆ ನೇಮಕಾತಿ ಮತ್ತು ಶಿಸ್ತು ಪ್ರಾಧಿಕಾರದ ಆಯುಕ್ತರು ಜಿಪಂ ಸಿಇಓ ಈ ಆದೇಶವನ್ನು ಆ.14ರಂದೇ ತಡೆಯೊಡ್ಡಿದೆ.

ಆದೇಶದಲ್ಲಿ ಏನಿದೆ?

ಕರ್ನಾಟಕ ನಾಗರೀಕ ಸೇವಾ ನಿಯಮಗಳು 1957ರ ಅನುಸೂಚಿ 2ರಂತೆ ಹಿರಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಪಿಡಿಓ ಹುದ್ದೆಗಳನ್ನು ರಾಜ್ಯ ವೃಂದವನ್ನಾಗಿ ಪರಿಗಣಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಇಲಾಕೆಯ ಆಯುಕ್ತರನ್ನು ನೇಮಕಾತಿ ಮತ್ತು ಶಿಸ್ತು ಪ್ರಾಧಿಕಾರವನ್ನಾಗಿ ನೇಮಿಸಿ ಸರ್ಕಾರ ಆದೇಶ ಮಾಡಿದೆ. ಈ ಆದೇಶದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಎಲ್ಲಾ ಹಂತದ ನೌಕರರನ್ನು ವರ್ಗಾವಣೆ, ನಿಯೋಜನೆ ಮಾಡುವ ವೇಳೆ ಸರ್ಕಾರದ ಅನುಮೋದನೆ ಪಡೆಯುವುದು ಕಡ್ಡಾಯವಾಗಿದೆ.

ಆದರೆ, ಇತ್ತೀಚಿಗೆ ರಾಮನಗರದಲ್ಲಿ ನಡೆದ 20 ಮಂದಿ ವರ್ಗಾವಣೆಯನ್ನು ನೇಮಕಾತಿ ಮತ್ತು ಶಿಸ್ತುಪ್ರಾಧಿಕಾರದ ಅನುಮೋದನೆಯನ್ನು ಪಡೆಯದ ಹಿನ್ನೆಲೆಯಲ್ಲಿ ಜಿಪಂ ಸಿಇಓ ಆದೇಶಕ್ಕೆ ತಡೆ ನೀಡಲಾಗಿದೆ ಎಂದು ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net