ಜಿಪಂ ಎಇಇ ಅಮಾನತು ಮಾಡಿ

ದೇವದುರ್ಗದಲ್ಲಿ ತಾಪಂ ಇಒ ಬಸವರಾಜ ಹಟ್ಟಿಗೆ ಜಯ ಕರ್ನಾಟಕ ಸಂಘಟನೆ ಮನವಿ ಸಲ್ಲಿಸಿತು. ತಾಲೂಕು ಅಧ್ಯಕ್ಷ ಯಲ್ಲಗೌಡ ಕೆ.ಇರಬಗೇರಾ, ಪ್ರಮುಖರಾದ ಸೋಫಿಸಾಬ್, ಮುಸ್ತಫಾ, ರಂಗನಾಥ ಚಿಕ್ಕಗುಡ್ಡ, ರಂಗನಾಥ, ಸಂಗಮೇಶ ಕಲ್ಲೂರು ಇತರರಿದ್ದರು.
ದೇವದುರ್ಗದಲ್ಲಿ ತಾಪಂ ಇಒ ಬಸವರಾಜ ಹಟ್ಟಿಗೆ ಜಯ ಕರ್ನಾಟಕ ಸಂಘಟನೆ ಮನವಿ ಸಲ್ಲಿಸಿತು. ತಾಲೂಕು ಅಧ್ಯಕ್ಷ ಯಲ್ಲಗೌಡ ಕೆ.ಇರಬಗೇರಾ, ಪ್ರಮುಖರಾದ ಸೋಫಿಸಾಬ್, ಮುಸ್ತಫಾ, ರಂಗನಾಥ ಚಿಕ್ಕಗುಡ್ಡ, ರಂಗನಾಥ, ಸಂಗಮೇಶ ಕಲ್ಲೂರು ಇತರರಿದ್ದರು.
Published on

ದೇವದುರ್ಗ: ಸರ್ಕಾರಿ ವಾಹನ ದುರ್ಬಳಕೆ ಮಾಡಿಕೊಂಡ ಜಿಪಂ ಗ್ರಾಮೀಣ ಕುಡಿವ ನೀರು ಹಾಗೂ ನೈರ್ಮಲ್ಯ ಉಪವಿಭಾಗದ ಎಇಇ ಹೀರಾಲಾಲ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆಯಿಂದ ಶುಕ್ರವಾರ ತಾಪಂ ಇಒ ಬಸವರಾಜ ಹಟ್ಟಿಗೆ ಮನವಿ ಸಲ್ಲಿಸಲಾಯಿತು.

ಜಿಪಂ ಎಇಇ ಹೀರಾಲಾಲ್ ಅವರು ಸಾರ್ವಜನಿಕ ಸೇವೆಗಾಗಿ ನೀಡಿರುವ ಸರ್ಕಾರಿ ವಾಹನವನ್ನು ವೈಯಕ್ತಿಕ ಕೆಲಸಕ್ಕೆ ಬಳಸಿಕೊಂಡಿದ್ದಾರೆ. ತಾಲೂಕಿನಲ್ಲಿ ಕೆಲಸ ಮಾಡುತ್ತಿದ್ದರೂ ರಾಯಚೂರಿನಲ್ಲಿ ಮನೆ ಮಾಡಿದ್ದು, ನಿತ್ಯ ಹೋಗಿ ಬರಲು ಹಾಗೂ ಕುಟುಂಬದ ಕೆಲಸಕ್ಕೆ, ವಿವಿಧೆಡೆ ಸಂಚರಿಸಲು ಸರ್ಕಾರಿ ವಾಹನ ಬಳಸುತ್ತಿದ್ದಾರೆ. ಮೇಲಧಿಕಾರಿಗಳು ನೋಟಿಸ್ ನೀಡಿದಾಗ ವಾಹನ ಬಳಕೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳದೇ ನಿರ್ಲಕ್ಷೃವಹಿಸಲಾಗಿದೆ. ತಪ್ಪು ಒಪ್ಪಿಕೊಂಡಿರುವ ಜಿಪಂ ಎಇಇ ಅವರನ್ನು ಅಮಾನತು ಮಾಡಿ ಮೇಲಧಿಕಾರಿಗಳಿಗೆ ಶಿಫಾರಸು ಮಾಡಬೇಕು. ನಿರ್ಲಕ್ಷ್ಯ ಮಾಡಿದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ತಾಲೂಕು ಅಧ್ಯಕ್ಷ ಯಲ್ಲಗೌಡ ಕೆ.ಇರಬಗೇರಾ, ಪ್ರಮುಖರಾದ ಸೋಫಿಸಾಬ್, ಮುಸ್ತಫಾ, ರಂಗನಾಥ ಚಿಕ್ಕಗುಡ್ಡ, ಸಂಗಮೇಶ ಕಲ್ಲೂರು, ಸಾಬಗೌಡ ಗುತ್ತೇದಾರ್, ರಂಗಪ್ಪ ಕರಿಗುಡ್ಡ, ಅಮರೇಶ, ವಿನೋದ್, ಹೇಮರೆಡ್ಡಿ, ಅನಿಲ್‌ಕುಮಾರ, ಶಂಕರ, ಶರಣಪ್ಪ, ರಂಗನಾಥ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net