

ಸಂಡೂರು: ಓದುವ, ಬರೆಯುವ ಹವ್ಯಾಸದಿಂದ ಉತ್ತಮ ಜೀವನ ರೂಪಿಸಿಕೊಳ್ಳಲು ಸಾಧ್ಯ ಎಂದು ಅಡಿಷನಲ್ ಕಮೀಷನರ್ ಆಪ್ ಸ್ಕೂಲ್ಸ್‌ನ ಡಾ. ಆಕಾಶ್ ಹೇಳಿದರು.
ಸುಶೀಲಾನಗರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪುಸ್ತಕಾಲಯ(ರೂಂ ಟು ರೀಡ್) ಉದ್ಘಾಟಿಸಿ ಮಂಗಳವಾರ ಮಾತನಾಡಿದರು. ಜೆಎಸ್‌ಬ್ಲುೃ ಫೌಂಡೇಶನ್ ಹಲವಾರು ಶಿಕ್ಷಣಾಭಿವೃದ್ದಿ ಕಾರ್ಯಗಳನ್ನು ಮಾಡುತ್ತಿದೆ. ಬಳ್ಳಾರಿ ವಿಭಾಗದಲ್ಲಿ 1473 ಸರ್ಕಾರಿ ಶಾಲೆಗಳಲ್ಲಿ ಪುಸ್ತಕಾಲಯವನ್ನು ಆರಂಭಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜೆಎಸ್‌ಡಬ್ಲುೃ ಫೌಂಡೇಶನ್‌ನ ಹಷರ್ವರ್ಧನ್ ನವತೆ ಮಾತನಾಡಿ, ಸಂಸ್ಥೆಯು ಸಾಮಾಜಿಕ ಸೇವೆ ಹಾಗೂ ಶೈಕ್ಷಣಿಕ ಅಭಿವೃದ್ಧಿಯ ದ್ಯೇಯೋದ್ದೇಶ ಹೊಂದಿದೆ. ಈಗಾಗಲೇ 1800 ಶಾಲೆಗಳಲ್ಲಿ ಶೈಕ್ಷಣಿಕ ಸಂಪನ್ಮೂಲಗಳಿಗೆ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
ಜಿಂದಾಲ್ ಸಂಸ್ಥೆಯ ಪೆದ್ದಣ್ಣ ಬೀಡಲಾ, ಸುನೀಲ್ ಸಿಂಗ್, ಡಿಡಿಪಿಐ ಉಮಾದೇವಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಡಾ.ಐ.ಆರ್.ಅಕ್ಕಿ, ಸವಿತಾ, ಪೂರ್ಣಿಮಾ ಗರ್ಗ, ಗ್ರಾಪಂ ಅಧ್ಯಕ್ಷೆ ರಾಮಿಬಾಯಿ ಈಶ್ವರನಾಯ್ಕ, ಉಪಾಧ್ಯಕ್ಷೆ ಈ.ಸುಜಾತಮ್ಮ ಮನೋಹರ್, ಶಾಲೆಯ ಮುಖ್ಯ ಶಿಕ್ಷಕ ಷಣ್ಮುಖಪ್ಪ, ಎಸ್ಡಿಎಂಸಿ ಅಧ್ಯಕ್ಷ ಮಂಜುನಾಯ್ಕ ಇನ್ನಿತರರಿದ್ದರು.