ಆಳ್ವಾಸ್‌ನ ಸುಶಾಂತ್ ರಾಷ್ಟ್ರೀಯಮಟ್ಟದಲ್ಲಿ 36ನೇ ರ‌್ಯಾಂಕ್ : ಸಿಎ ಇಂಟರ್ ಮೀಡಿಯೆಟ್‌ನಲ್ಲಿ ಅಮೋಘ ಸಾಧನೆ

Published on

ಮೂಡುಬಿದಿರೆ: ಸೆಪ್ಟೆಂಬರ್‌ನಲ್ಲಿ ನಡೆದ ಸಿ.ಎ. ಇಂಟರ್ ಮೀಡಿಯೆಟ್ ಪರೀಕ್ಷೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಬಿ.ಕಾಂ. ವಿದ್ಯಾರ್ಥಿ ಸುಶಾಂತ್ 380 ಅಂಕಗಳೊಂದಿಗೆ ರಾಷ್ಟ್ರೀಯಮಟ್ಟದಲ್ಲಿ 36ನೇ ರ‌್ಯಾಂಕ್ ಗಳಿಸಿದ್ದಾರೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ದತ್ತು ಶಿಕ್ಷಣ ಯೋಜನೆಯಡಿ ಪದವಿ ಶಿಕ್ಷಣ ಪಡೆಯುತ್ತಿದ್ದಾರೆ.

ರಿತ್ವಿಕ್ ಜೆ.ಶೆಟ್ಟಿ (327), ಸ್ಮಿತಾ ಎಸ್.ಹೆಗ್ಡೆ (301), ಜ್ಯೋತಿ (300) ಗ್ರೂಪ್ 1 ಮತ್ತು ಗ್ರೂಪ್ 2 ವಿಭಾಗದಲ್ಲಿ ಮೊದಲ ಪ್ರಯತ್ನದಲ್ಲಿ ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿದ್ದಾರೆ. ಇಂಟರ್‌ಮೀಡಿಯೆಟ್ ಗ್ರೂಪ್ 1 ವಿಭಾಗದಲ್ಲಿ ಕಿರಣ್ (167), ಶ್ರೀರಕ್ಷಾ (165) ಮತ್ತು ಪ್ರೀತಮ್ ವಿ.ನಾಯ್ಕ (150) ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿದ್ದಾರೆ.

ಇಂಟರ್ ಮೀಡಿಯೆಟ್ ಗ್ರೂಪ್ 2 ವಿಭಾಗದಲ್ಲಿ ಮಯೂರಿ (173), ಕಲ್ಪನಾ ಗಜಾನನಾ ಹೆಗ್ಡೆ (170), ಸಿ.ಶ್ರೇಯಾಂಕ್ ನಾಯಕ್ (164), ಪಲ್ಲವಿ ಆರ್. (160), ವಿಕ್ರಾಂದ್ ಪುಂಡಲೀಕ್ (159), ಪಾಯಲ್ ಜೆ.ಬಂಗೇರ (155), ಅನನ್ಯಾ ಕೆ. (151), ಸ್ಪರ್ಶ ಹೆಗ್ಡೆ (150) ಮತ್ತು ಸಿದ್ದಾರ್ಥ್ ಪಿ. (110) ಉತ್ತೀರ್ಣರಾಗಿದ್ದಾರೆ.

ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ಪ್ರಾಂಶುಪಾಲ ಡಾ.ಕುರಿಯನ್ ಹಾಗೂ ಸಿ.ಎ. ಸಂಯೋಜಕರು ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net