ಹೊಳೆ ಹೂಳೆತ್ತುವ ಕಾರ್ಯಕ್ಕೆ ಸರ್ವೆ ಶುರು

kota.me.8 hole hulethuva.p
Published on

ಕೋಟ: ಕೋಟ ಗ್ರಾಮ ಪಂಚಾಯಿತಿ, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಗೊಳಪಡುವ ಹೊಳೆ ಸಾಲುಗಳ ಹೂಳು ತೆರವು ಮಾಡಬೇಕೆಂಬ ರೈತ ಸಂಘಟನೆಗಳ ಆಗ್ರಹದ ಮೇರೆಗೆ ಸರ್ಕಾರವು ವಾರಾಹಿ ಯೋಜನೆಯಡಿ 4.5 ಕೋಟಿ ರೂ. ಮಂಜೂರು ಮಾಡಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಸರ್ವೆ ಕಾರ್ಯ ಆರಂಭಗೊಂಡಿದೆ.

ವಾರಾಹಿ ಇಂಜಿನಿಯರ್ ಸುನೀಲ್ ಎಂ. ನೇತೃತ್ವದಲ್ಲಿ ಸೂಲಡ್ಪು ಮಡಿವಾಳ ಸಾಲು ಸೇರಿದಂತೆ ವಿವಿಧ ಭಾಗಗಳ ಸ್ಥಳ ಪರಿಶೀಲಿಸಿ ಸರ್ವೆ ಕಾರ್ಯ ಆರಂಭವಾಯಿತು. ವಾರಾಹಿ ಯೋಜನೆ ಸಹಾಯಕ ಇಂಜಿನಿಯರ್‌ಗಳಾದ ಪ್ರಸನ್ನ ಕಾಮತ್, ಅನಿಲ್ ಕುವಾರ್, ಕೋಟ ರೈತಧ್ವನಿ ಸಂಘಟನೆ ಅಧ್ಯಕ್ಷ ಜಯರಾಮ ಶೆಟ್ಟಿ, ಸಂಘಟನೆ ಪ್ರಮುಖರಾದ ಟಿ.ಮಂಜುನಾಥ್ ಗಿಳಿಯಾರು, ಸುಭಾಷ್ ಶೆಟ್ಟಿ ಗಿಳಿಯಾರು, ಮಹೇಶ್ ಶೆಟ್ಟಿ, ಬಾಬು ಶೆಟ್ಟಿ ಹರ್ತಟ್ಟು, ತಿಮ್ಮ ಕಾಂಚನ್, ಮಹಾಬಲ ಪೂಜಾರಿ, ನಾಗರಾಜ ಗಾಣಿಗ, ರಮೇಶ್ ಮೆಂಡನ್, ಮಹಾಬಲ ಪೂಜಾರಿ ದೇಸಿಕೆರೆ, ಕೀರ್ತಿ ಪೂಜಾರಿ, ಪ್ರಕಾಶ್ ಶೆಟ್ಟಿ ಹರ್ತಟ್ಟು ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net