ಶರಣರಿಂದ ನಾಡಿನಲ್ಲಿ ಅಕ್ಷರ ಕ್ರಾಂತಿ

18-may-hdl--03
ಹೂವಿನಹಡಗಲಿ ತಾಲೂಕಿನ ಹೊಳಗುಂದಿಯಲ್ಲಿ ಆಯೋಜಿಸಿದ್ದ ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಅಳವಂಡಿ ಕಟ್ಟಿಮನಿ ಹಿರೇಮಠದ ಮರುಳಾರಾಧ್ಯ ಸ್ವಾಮೀಜಿ ಉದ್ಘಾಟಿಸಿದರು. ಪ್ರೌಢಶಾಲೆ ಮುಖ್ಯಗುರು ಟಿ.ವೆಂಕಟೇಶ, ಸಿದ್ದೇಶ್ವರ ದೇವಸ್ಥಾನ ಮಂಡಳಿ ಅಧ್ಯಕ್ಷ ಎಸ್.ಮಹೇಶಪ್ಪ, ನಿವೃತ್ತ ಶಿಕ್ಷಕರಾದ ಪರಮೇಶ್ವರಯ್ಯ, ಕೆ.ಎಸ್.ಜಯದೇವಯ್ಯ, ಮಲ್ಲಪ್ಪ ಇತರರಿದ್ದರು.
Published on

ಹೂವಿನಹಡಗಲಿ: ಉತ್ತರ ಕರ್ನಾಟಕ ಭಾಗದಲ್ಲಿನ ಮಠ-ಮಾನ್ಯಗಳು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸುವ ಮೂಲಕ ಅಕ್ಷರ ಕ್ರಾಂತಿ ಮಾಡಿವೆ, ಪುಟ್ಟರಾಜ ಗವಾಯಿಗಳು ಹಾಗೂ ಹಾನಗಲ್ಲ ಕುಮಾರೇಶ್ವರರು ಈ ಕ್ರಾಂತಿಗೆ ಕಾರಣರಾದರು ಎಂದು ಅಳವಂಡಿ ಕಟ್ಟಿಮನಿ ಹಿರೇಮಠದ ಮರುಳಾರಾಧ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಹೊಳಗುಂದಿ ಗ್ರಾಮದ ಶ್ರೀ ಸಿದ್ದೇಶ್ವರ ದೇವಸ್ಥಾನದಲ್ಲಿ ಅ.ಮ.ಪ.ಶಂಕರಲಿಂಗಯ್ಯ ಪ್ರೌಢಶಾಲೆಯಲ್ಲಿ 1990-91ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಂದ ಭಾನುವಾರ ಆಯೋಜಿಸಿದ್ದ ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ ಕಲಿಸುವ ಮೂಲಕ ಸಂಸ್ಕೃತಿಯ ಪರಿಚಯ ಮಾಡಿಸುವ ಅನಿವಾರ್ಯತೆ ಎದುರಾಗಿದೆ. ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿರುವ ಇಂದಿನ ಯುವಪೀಳಿಗೆ ಸಂಸ್ಕೃತಿ ಮರೆಯುತ್ತಿದೆ. ಅಂದಿನ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸಂಬಂಧವನ್ನು ವಿವರಿಸಲಾಗದು. ಇಂದು ಎಲ್ಲವೂ ಬದಲಾಗುತ್ತಿದೆ ಎಂದರು.

10ನೇ ತರಗತಿ ಪರೀಕ್ಷೆಯಲ್ಲಿ ಶೇ.90 ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪ್ರೌಢಶಾಲೆಯ ಮುಖ್ಯಗುರು ಟಿ.ವೆಂಕಟೇಶ, ನಿವೃತ್ತ ಶಿಕ್ಷಕರಾದ ಪರಮೇಶ್ವರಯ್ಯ, ಕೆ.ಎಸ್.ಜಯದೇವಯ್ಯ, ಮಲ್ಲಪ್ಪ, ಪಿ.ಕೆ.ಪಾಟೀಲ್, ಟಿ.ಜಾತಪ್ಪ, ಚಂದ್ರಕಾಂತ, ಸಿದ್ದೇಶ್ವರ ದೇವಸ್ಥಾನ ಮಂಡಳಿ ಅಧ್ಯಕ್ಷ ಎಸ್.ಮಹೇಶಪ್ಪ, ಹಳೆಯ ವಿದ್ಯಾರ್ಥಿಗಳಾದ ಅಶೋಕ, ಕೊಟ್ರೇಶ್, ಯು.ಎಂ.ಶಿವಯೋಗಿ, ವೀರೇಶ, ಯುವರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net