ದೇವೇಗೌಡರ ಜತೆ ಇದ್ದುಕೊಂಡು ಪಕ್ಷ ವಿರೋಧಿ ಕೆಲಸ ಮಾಡುವವರು ಕೆಟ್ಟ... ಮಹಿಳೆಯರ ಕುರಿತು Suraj Revanna ವಿವಾದಾತ್ಮಕ ಹೇಳಿಕೆ

Suraj Revanna
Published on

ಹಾಸನ: ಕಳೆದ ಕೆಲ ತಿಂಗಳುಗಳಿಂದ ರಾಜ್ಯ ರಾಜಕಾರಣದಲ್ಲಿ ಜೆಡಿಎಸ್ ಶಾಸಕ ಎಚ್​. ಡಿ. ರೇವಣ್ಣ ಅವರ ಕುಟುಂಬ ಸಖತ್ ಸೌಂಡ್​ ಮಾಡುತ್ತಿದ್ದು, ವಿವಾದಾತ್ಮಕ ಸುದ್ದಿಗಳಿಗೆ ಹೆಸರುವಾಸಿಯಾಗಿದ್ದಾರೆ. ಇದೀಗ ಹಾಸನ ಕ್ಷೇತ್ರದ ವಿಧಾನಪರಿಷತ್ ಸದಸ್ಯ ಸೂರಜ್​ ರೇವಣ್ಣ (Suraj Revanna) ಹೆಣ್ಣುಮಕ್ಕಳ ಬಗ್ಗೆ ಅವಾಚ್ಯವಾಗಿ ಮಾತನಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಈ ವಿಚಾರ ಹೊಸದೊಂದು ವಿವಾದವನ್ನು ಹುಟ್ಟುಹಾಕಿದೆ.

ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಅಗ್ರಹಾರ ಗ್ರಾಮದಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಭಾಗಿಯಾಗಿದ್ದ ಸೂರಜ್​ ರೇವಣ್ಣ (Suraj Revanna) ಭಾಷಣ ಮಾಡುವಾಗ ಅವಾಚ್ಯ ಶಬ್ದವನ್ನು ಬಳಸಿದ್ದಾರೆ. ಸದ್ಯ ಈ ವಿಚಾರ ಚರ್ಚೆಗೆ ಗ್ರಾಸವಾಗಿದೆ.

ಹಾಸನದಲ್ಲಿ ಇರುವುದು ಎರಡೇ ಪಕ್ಷ, ಒಂದು ದೇವೇಗೌಡರ ಪರ, ಇನ್ನೊಂದು ವಿರುದ್ಧವಾಗಿರುವವರ ಪಕ್ಷ. ಅಂದು ನಮ್ಮ ತಾತನವರು ಹೇಳಿದ್ದ ಮಾತು ನನಗೆ ಈಗ ಅರ್ಥವಾಗುತ್ತಿದೆ. ನಾನು ಇಲ್ಲಿಗೆ ಬಂದಾಗ  ನಾಯಿಕಣ್ಣು, ನರಿ ಕಣ್ಣು, ಕೆಟ್ಟ ಮು... ಕಣ್ಣು ಅಂತಾ ದೃಷ್ಟಿ ತೆಗೆದರು. ಆಗ ನಾನು ಮನಸ್ಸಿನಲ್ಲಿ ಅಂದುಕೊಂಡೆ ಕೆಟ್ಟ ಸೂ... ಕಣ್ಣು ಅಂತಾ ಯಾಕೆ ಹೇಳಲಿಲ್ಲವೆಂದು. ಯಾಕೆಂದರೆ ಪಕ್ಷದಲ್ಲಿದ್ದುಕೊಂಡೆ ದೇವೇಗೌಡರ ವಿರುದ್ಧ ಅಂತ ಬಿಂಬಿಸಿಕೊಳ್ಳದೇ, ಮೋಸ ಮಾಡಿದವರಿಗೆ ಈ ಮಾತನ್ನು ಹೇಳುತ್ತಿದ್ದೇನೆ. ನಾನು ಯಾವ ಹೆಣ್ಣುಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿಲ್ಲ. ತಪ್ಪು ತಿಳಿದುಕೊಳ್ಳಬೇಡಿ ಎಂದು ಹೇಳಿದ್ದಾರೆ.

Suraj Revanna

ನಾನು ಪೆನ್​ಡ್ರೈವ್​ ಹಂಚಿ ಎಂಎಲ್​ಸಿ ಆದವನಲ್ಲ. ಯಾವುದೇ ಇಲಾಖೆಯಲ್ಲಿ ಏನೇ ತೊಂದರೆ ಆದರೂ ಕಾರ್ಯಕರ್ತರು ನನ್ನ ಗಮನಕ್ಕೆ ತನ್ನಿ. ನಾನು ನಿಮ್ಮ ಪರವಾಗಿ ನಿಲ್ಲುತ್ತೇನೆ. ಯಾವುದೇ ಜಾತಿ, ಜನಾಂಗ ನೋಡಬೇಡ, ಎಲ್ಲಾ ಹಳ್ಳಿಗಳಿಗೂ ಒಳ್ಳೆಯದು ಮಾಡು ಎಂದು ನಮ್ಮ ತಾತ ಹೇಳಿದ್ದಾರೆ. ಒಮ್ಮೆ ಒಂದು ಸಮುದಾಯ ಕೈಬಿಡಬಹುದು, ಅರ್ಥ ಆದ ಬಳಿಕ ನಿನ್ನೆ ಕೈ ಹಿಡಿಯುತ್ತಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಜಾತಿ ಎನ್ನುವ ವಿಷ ಬೀಜ ಬಿತ್ತಿದ್ದರು. ಎಚ್​.ಡಿ. ರೇವಣ್ಣ ಅವರು ಎಷ್ಟು ದೇವಾಲಯ ಕಟ್ಟಿದ್ದಾರೆ ಎಂಬುದನ್ನು ಸಂಸದರು ಮೊದಲು ತಿಳಿದುಕೊಳ್ಳಬೇಕು. ಅವರಿಗೆ ಮೊದಲು ಅದನ್ನು ಕೇಳಿಕೊಂಡು ಬರಲು ಹೇಳಿ ಎಂದು ಜೆಡಿಎಸ್​ ವಿಧಾನಪರಿಷತ್​ ಸದಸ್ಯ ಸೂರಜ್​ ರೇವಣ್ಣ (Suraj Revanna) ವಾಗ್ದಾಳಿ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net