ಮಕ್ಕಳಿಲ್ಲದ ದಂಪತಿಗೆ ಮನೆ ನಿರ್ಮಿಸಿಕೊಟ್ಟು ಆಸರೆ

Ism_building-house
Published on

ವಿಜಯವಾಣಿ ಸುದ್ದಿಜಾಲ, ಪುತ್ತೂರು ಗ್ರಾಮಾಂತರ

ಅರಿಯಡ್ಕ ಗ್ರಾಮದ ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಬಳಗ, ಗ್ರಾಪಂ ಮತ್ತು ದಾನಿಗಳ ಸಹಕಾರದೊಂದಿಗೆ ಮಕ್ಕಳಿಲ್ಲದ ದಂಪತಿಗೆ ಮನೆ ನಿರ್ಮಿಸಿ ಮಾನವೀಯ ಕಳಕಳಿ ಮೆರೆದಿದೆ.

ಸ್ವಾಮಿನಗರದ ಕಿಟ್ಟಣ್ಣ ರೈ ಮತ್ತು ಭಾಗೀರಥಿ ದಂಪತಿಗೆ ‘ಶ್ರೀವಿಷ್ಣು ಯುವಶಕ್ತಿ ನಿಲಯ’ ಮನೆಯ ಹಸ್ತಾಂತರ ಬಳಗದ ಅಧ್ಯಕ್ಷ ರಘುನಾಥ ಪೂಜಾರಿ ಗೋಳ್ತಿಲ ಉಪಸ್ಥಿತಿಯಲ್ಲಿ ನಡೆಯಿತು. ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸ್ಥಾಪಕಾಧ್ಯಕ್ಷ ಅರುಣ್‌ಕುಮಾರ್ ಪುತ್ತಿಲ ನಾಮಫಲಕ ಅನಾವರಣಗೊಳಿಸಿದರು.

ಶ್ರೀ ವಿಷ್ಣು ಯುವಶಕ್ತಿ ಬಳಗದ ಮಕ್ಕಳ ಕುಣಿತ ಭಜನೆ ನಡೆಯಿತು. ದಾನಿಗಳನ್ನು ಗೌರವಿಸಲಾಯಿತು. ದ.ಕ. ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಪುತ್ತೂರು ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ದಿನೇಶ್ ಸಾಲಿಯಾನ್, ಶ್ರಿವಿಷ್ಣು ಯುವಶಕ್ತಿ ಸಂಘಟನೆ ಗೌರವ ಸಲಹೆಗಾರ ಮೋಹನ್‌ದಾಸ್ ರೈ ಕುಂಬ್ರ, ಕಿಶೋರ್ ಶೆಟ್ಟಿ ಅರಿಯಡ್ಕ, ಗಂಗಾರತ್ನ ಮತ್ತು ಬಳಗದ ಅಧ್ಯಕ್ಷ ರಘುನಾಥ ಪೂಜಾರಿ ಗೋಳ್ತಿಲ, ಸಂಪ್ಯ ಪೊಲೀಸ್ ಠಾಣೆಯ ಪ್ರವೀಣ್ ರೈ ನಡುಕೋಟೇಲು, ಅಭಿನವ ಕೇಸರಿ ಮಾಡಾವು ಇದರ ಮನೋಜ್ ರೈ ಮಾಡಾವು ಪಾಲ್ಗೊಂಡರು. ಶೋಭಿತ ಭಂಡಾರಿ ಸ್ವಾಮಿನಗರ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಭರತ್ ಪೂಜಾರಿ ಓಲ್ತಾಜೆ ನಿರೂಪಿಸಿದರು.

ಅರಿಯಡ್ಕ ಗ್ರಾಪಂ, ಸಂಘಟನೆಯ ಗೌರವಾಧ್ಯಕ್ಷರು ಹಾಗೂ ದಾನಿಗಳ ಸಹಕಾರ ಪಡೆದು ಸದಸ್ಯರು ಶ್ರಮದ ಮೂಲಕ ಮಕ್ಕಳಿಲ್ಲದ ದಂಪತಿಗೆ ಮಕ್ಕಳಂತೆ ನಿಂತು ಮನೆಯೊಂದನ್ನು ನಿರ್ಮಿಸಿ ಕೊಡುವ ಕೆಲಸ ಮಾಡಿದ್ದೇವೆ. ಸಂಘಟನೆಯೊಂದಿಗೆ ಕೈಜೋಡಿಸಿದ ಎಲ್ಲರಿಗೂ ನಾವು ಆಭಾರಿ. ರಾಜೇಶ್ ಕೆ.ಮಯೂರ ಸಂಘಟಕ

ರಾಜೇಶ್ ಕೆ.ಮಯೂರ ಸಂಘಟಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net