ವಿಜ್ಞಾನ ಮೇಳಕ್ಕೆ ಲಾಂಛನ ಆಹ್ವಾನ

Published on

ಕಾಸರಗೋಡು: ಚೆಮ್ನಾಡ್ ಜಮಾಅತ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನವೆಂಬರ್ 1 ಮತ್ತು 2ರಂದು ನಡೆಯಲಿರುವ ಕಾಸರಗೋಡು ಕಂದಾಯ ಜಿಲ್ಲಾ ಶಾಲಾ ವಿಜ್ಞಾನೋತ್ಸವಕ್ಕೆ ಲಾಂಛನ ಆಹ್ವಾನಿಸಲಾಗಿದೆ. ಪಿಎನ್‌ಜಿ ಮತ್ತು ಪಿಡಿಎಫ್ ಮೂಲಕ ತಯಾರಿಸಿದ ಲೋಗೋ, ರಚಿಸಿದ ವ್ಯಕ್ತಿಯ ವಿವರಗಳನ್ನು ಒಳಗೊಂಡ ಮಾಹಿತಿಯನ್ನು ಅಕ್ಟೋಬರ್ 18ರ ಮೊದಲು *ಞಚಿಚಿಣಡಿಚಿಟಚಿ24ಚಿಟ.ಛಿ ಇ-ಮೇಲ್ ಅಥವಾ 9846458069 ನಂಬರ್‌ಗೆ ವಾಟ್ಸ್‌ಆ್ಯಪ್ ಮೂಲಕ ಕಳುಹಿಸಿಕೊಡಬಹುದಾಗಿದೆ. ಆಯ್ಕೆಯಾದ ಲಾಂಛನ ತಯಾರಿಸಿದವರಿಗೆ ವಿಜ್ಞಾನ ಮೇಳದ ವೇದಿಕೆಯಲ್ಲಿ ಪುರಸ್ಕಾರ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net