ಕೆರೆಗುಡಿಹಳ್ಳಿಗೆ ಕುಡಿವ ನೀರು ಪೂರೈಸಿ: ತಾಪಂ ಎದುರು ಪ್ರತಿಭಟನೆ

Untitled design (8)
ಹರಪನಹಳ್ಳಿ ತಾಪಂ ಆವರಣದಲ್ಲಿ ಹೊಸಕೋಟೆ ಗ್ರಾಪಂನ ಕೆರೆಗುಡಿಹಳ್ಳಿಗೆ ಕುಡಿವ ನೀರು ಪೂರೈಸುವಂತೆ ಆಗ್ರಹಿಸಿ ಎಐಕೆಎಸ್ ಮುಖಂಡರು ಪ್ರತಿಭಟನೆ ನಡೆಸಿದರು.
Published on

ಹರಪನಹಳ್ಳಿ: ತಾಲೂಕಿನ ಕೆರೆಗುಡಿಹಳ್ಳಿ ಕಳೆದ ಒಂದು ವರ್ಷದಿಂದ ಕುಡಿವ ನೀರಿನ ಸಮಸ್ಯೆ ಎದುರಿಸುತ್ತಿದ್ದು, ಕೂಡಲೇ ಬಗೆಹರಿಸುವಂತೆ ಒತ್ತಾಯಿಸಿ ಪಟ್ಟಣದ ತಾಪಂ ಎದುರು ಎಐಕೆಎಸ್ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.

ಗ್ರಾಮಾಡಳಿತ ಜನರ ಜೀವದ ಜತೆ ಚೆಲ್ಲಾಟವಾಡುತ್ತಿದೆ

ಎಐಕೆಎಸ್ ಜಿಲ್ಲಾಧ್ಯಕ್ಷ ಗುಡಿಹಳ್ಳಿ ಹಾಲೇಶ್ ಮಾತನಾಡಿ, ಗ್ರಾಮದ ಜನರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸಮರ್ಪಕ ಕುಡಿವ ನೀರು ಪೂರೈಸುವಂತೆ ಸಾಕಷ್ಟು ಬಾರಿ ಮನವಿ ಮಾಡಿದರು ಬಗೆಹರಿಸಿಲ್ಲ. ಗ್ರಾಮಾಡಳಿತ ಜನರ ಜೀವದ ಜತೆ ಚೆಲ್ಲಾಟವಾಡುತ್ತಿದೆ ಎಂದು ದೂರಿದರು.

ನೀರಿಲ್ಲದೆ ಜನ-ಜಾನುವಾರುಗಳಿಗೆ ಹಾಹಾಕಾರ

ಗ್ರಾಮದಲ್ಲಿ ಎರಡು ಬೊರವೆಲ್‌ಗಳಿದ್ದರೂ ವಿದ್ಯುತ್ ಸಂಪರ್ಕ ಇಲ್ಲದೆ ಖಾಸಗಿ ಬೋರ್‌ವೆಲ್ ನೀರು ಬಳಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ಈಚೆಗೆ ಖಾಸಗಿ ವ್ಯಕ್ತಿಗಳು ಸಹ ಗ್ರಾಮಕ್ಕೆ ನೀರು ಕೊಡುವುದನ್ನು ನಿಲ್ಲಿಸಿದ್ದಾರೆ. ಇದರಿಂದ ಜನ-ಜಾನುವಾರುಗಳಿಗೆ ಹಾಹಾಕಾರ ಶುರವಾಗಿದೆ. ಕೂಡಲೇ ಗ್ರಾಮದ ಬೋರ್‌ವೆಲ್‌ಗಳಿಗೆ ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಅಲ್ಲಿಯವರೆಗೆ ತಾತ್ಕಲಿಕವಾಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವಂತೆ ತಾಪಂ ಇಒ ಕೆ.ಆರ್.ಪ್ರಕಾಶ್‌ಗೆ ಮನವಿ ಸಲ್ಲಿಸಿದರು.


ಪ್ರತಿಭಟನೆಯಲ್ಲಿ ಬಳಿಗನೂರು ಕೊಟ್ರೇಶ್, ಸಿದ್ದಪ್ಪ, ಜಿ.ಗಂಗಪ್ಪ, ಆರ್.ಸಿದ್ದೇಶ್, ಬಿ.ನಾಗಪ್ಪ, ಕಲ್ಲೇಶಪ್ಪ, ಪಿ.ಎಸ್.ವೀರೇಶ್, ರುದ್ರಪ್ಪ, ಮಂಜುನಾಥ, ತಿಮ್ಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net