ಮೂಢನಂಬಿಕೆಯಿಂದ ದೂರವಿರಲು ಜಾಗೃತಿ ಅಗತ್ಯ

31mnv02
ಮಾನ್ವಿ ತಾಲೂಕಿನ ಜಾಗಿರ್ ಪನ್ನೂರು ಗ್ರಾಮದಲ್ಲಿ ನಡೆದ ಶಿಬಿರದಲ್ಲಿ ಉಪನ್ಯಾಸಕ ರಾಘವೇಂದ್ರ.ಎಸ್ ಮಾತನಾಡಿದರು. ಪ್ರಾಚಾರ್ಯ ಸಿದ್ದನಗೌಡ ಪಾಟೀಲ್, ಆಂಜನೇಯ, ದೇವೇಂದ್ರಪ್ಪ ಇದ್ದರು.
Published on

ಮಾನ್ವಿ: ಮೌಢ್ಯಾಚರಣೆಗಳಿಂದ ದೂರವಿದ್ದು ನೆಮ್ಮದಿ ಬದಕು ಸಾಗಿಸಬೇಕೆಂದು ಕಲ್ಮಠ ಕಾಲೇಜ್‌ನ ಉಪನ್ಯಾಸಕ ರಾಘವೇಂದ್ರ ಹೇಳಿದರು.

ತಾಲೂಕಿನ ಜಾಗಿರ್ ಪನ್ನೂರು ಗ್ರಾಮದ ಕಲ್ಮಠ ಪದವಿ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ಆಯೋಜಿಸಿದ ವಿಶೇಷ ಶಿಬಿರದಲ್ಲಿ ಶನಿವಾರ ಮಾತನಾಡಿದರು.

ಹಳ್ಳಿಯ ಮುಗ್ದ ಜನರನ್ನ ಮಾಟ, ಮಂತ್ರ, ವಾಮಾಚಾರ ಹೆಸರಲ್ಲಿ ಶೋಷಣೆ ಮಾಡುತ್ತಿರುವುದು ನಿಂತಿಲ್ಲ. ಇದರಿಂದ ದೂರವಿರಲು ಜಾಗೃತಿ ಮೂಡಿಸುವುದು ಅಗತ್ಯ.

ತಾಂತ್ರಿಕ ಯುಗದಲ್ಲೂ ಮೂಢನಂಬಿಕೆಗಳು ಹೆಚ್ಚಾಗುತ್ತಿರುವುದು ಶೋಚನೀಯ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು. ಕಲ್ಮಠ ಪದವಿ ಮಹಾವಿದ್ಯಾಲಯ ಪ್ರಾಚಾರ್ಯ ಸಿದ್ದನಗೌಡ ಪಾಟೀಲ್, ವೈಷ್ಣವಿ, ದೇವೇಂದ್ರಪ್ಪ, ಶಿಬಿರ ಕಾರ್ಯಕ್ರಮ ಅಧಿಕಾರಿ ಆನಂದ ಮುಕ್ಕಣ್ಣ, ಆಂಜನೇಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net