'ಚಿಣ್ಣರ ಸಂತೆ'ಯಲ್ಲಿ ವಹಿವಾಟು ಜೋರು!

Chinnara Sante
Published on

ಪೀಣ್ಯ ದಾಸರಹಳ್ಳಿ: ವಿದ್ಯಾರ್ಥಿಗಳಿಗೆ ಸಂತೆಯ ವಾತಾವರಣ ಕಲ್ಪಿಸಿ, ವ್ಯವಹಾರ ಜ್ಞಾನ ತಿಳಿಸಿಕೊಡುವ ಉದ್ದೇಶದಿಂದ ಪೀಣ್ಯ 2ನೇ ಹಂತದಲ್ಲಿರುವ ಸನ್​ರೈಸ್​ ಪಬ್ಲಿಕ್​ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ 'ಚಿಣ್ಣರ ಸಂತೆ' ಗಮನಸೆಳೆದಿದೆ. ವಿದ್ಯಾರ್ಥಿಗಳು ಸ್ವ-ಆಸಕ್ತಿಂದ ವಹಿವಾಟು ನಡೆಸಿದರು. ಪಾಲಕರು, ಶಿಕ್ಷಕರು ಸಂತೆಯಲ್ಲಿ ಪಾಲ್ಗೊಂಡು ವಿವಿಧ ವಸ್ತುಗಳನ್ನು ಖರೀದಿಸಿ ಪ್ರೋತ್ಸಾಹಿಸಿದರು.

'ಚಿಣ್ಣರ ಸಂತೆ' ಉದ್ಘಾಟಿಸಿ ಮಾತನಾಡಿದ ಬ್ಲೂಮೂನ್​ ಶಾಲೆಯ ಕಾರ್ಯದರ್ಶಿ ಸಿ.ಎನ್​.ಚಂದ್ರಶೇಖರ್​, ಆನ್​ಲೈನ್​ ಶಾಪಿಂಗ್​ನಲ್ಲಿ ಇಂದಿನ ವಿದ್ಯಾರ್ಥಿಗಳು ಹೆಚ್ಚಾಗಿ ತೊಡಗಿಸಿಕೊಂಡಿದ್ದು, ಭೌತಿಕವಾಗಿ ನಡೆಯುವ ವ್ಯಾಪಾರ ಬಗ್ಗೆ ಜ್ಞಾನ ಕಡಿಮೆಯಾಗುತ್ತಿದೆ. ಶಾಲೆಯಲ್ಲಿ ಇಂತಹ ಪ್ರಾಯೋಗಿಕ ಕಾರ್ಯಕ್ರಮಗಳಿಂದ ಮಕ್ಕಳಿಗೆ ವ್ಯಾಪಾರ&ವಹಿವಾಟ ಪ್ರಕ್ರಿಯೆಯನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಇಂತಹ ಚಟುವಟಿಕೆಗಳು ಹೆಚ್ಚಬೇಕೆಂದು ಆಶಿಸಿದರು.

ಸನ್​ರೈಸ್​ ಪಬ್ಲಿಕ್​ ಶಾಲೆಯ ಕಾರ್ಯದರ್ಶಿ ಡಾ.ಮಹೇಶ್​, ಪ್ರಾಂಶುಪಾಲೆ ವಿ.ಧನಲಕ್ಷ್ಮೀ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net