ಶಿಕ್ಷಕರ ಅರ್ಹತಾ ಪರೀಕ್ಷೆ; ಹಾಲ್​ ಟಿಕೆಟ್​​ನಲ್ಲಿ ಪರೀಕ್ಷಾರ್ಥಿ ಯುವತಿಯ ಬದಲು ಸನ್ನಿ ಲಿಯೋನ್ ಫೋಟೋ!

Sunny
Published on

ಶಿವಮೊಗ್ಗ: ಶಿಕ್ಷಣ ಇಲಾಖೆಯಿಂದ ನ.6ರಂದು ನಡೆಸಿದ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಹಾಜರಾಗಿದ್ದ ಪರೀಕ್ಷಾರ್ಥಿ ಯುವತಿಯ ಹಾಲ್ ಟಿಕೆಟ್​ನಲ್ಲಿ ಪರೀಕ್ಷಾರ್ಥಿಯ ಫೋಟೋ ಬದಲು ನಟಿ ಸನ್ನಿ ಲಿಯೋನ್ ಫೋಟೋ ಮುದ್ರಣಗೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಚಿಕ್ಕಮಗಳೂರು ಜಿಲ್ಲೆ ಕೊಪ್ಪದ ವಿದ್ಯಾರ್ಥಿನಿಯೊಬ್ಬರು ಶಿವಮೊಗ್ಗದ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ರುದ್ರಪ್ಪ ಕಾಲೇಜಿನಲ್ಲಿ ಟಿಇಟಿ ಪರೀಕ್ಷೆ ಬರೆಯಲು ಬಂದಿದ್ದರು. ಪರೀಕ್ಷೆ ಬರೆಯಲು ಬಂದ ಯುವತಿಯ ಹಾಲ್ ಟಿಕೇಟ್​​ನಲ್ಲಿ ಸನ್ನಿ ಲಿಯೋನ್ ಫೋಟೋ ಇರುವ ಬಗ್ಗೆ ವಿದ್ಯಾರ್ಥಿನಿ ಪರೀಕ್ಷೆ ಬರೆಯುವ ಅರ್ಧ ತಾಸು ಮುಂಚೆ ಕಾಲೇಜಿನ ಪ್ರಾಚಾರ್ಯರಿಗೆ ಮಾಹಿತಿ ನೀಡಿದ್ದಾಳೆ.

ಪ್ರಾಚಾರ್ಯರು ಡಿಡಿಪಿಐಗೆ ವಿಷಯ ತಿಳಿಸಿದ್ದಾರೆ. ಆ ಸಂದರ್ಭದಲ್ಲಿ ಎಲ್ಲವನ್ನೂ ಗುಪ್ತವಾಗಿರಿಸಿ ಪರೀಕ್ಷಾರ್ಥಿಗೆ ಅವಕಾಶ ನೀಡಲಾಗಿತ್ತು. ಮಂಗಳವಾರ ಕಾಲೇಜಿನ ಪ್ರಾಚಾರ್ಯರು ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net