

ಕೊಳ್ಳೇಗಾಲ: ಕಾವೇರಿ ಪ್ರವಾಹದಿಂದ ತಾಲೂಕಿನ ಶಿವನಸಮುದ್ರದ ಪಾರಂಪರಿಕ ವೆಸ್ಲಿ ಸೇತುವೆ ಮುಳುಗಡೆಯಾಗಿ ಸೇತುವೆಯ ತುದಿ ಹಾನಿಗೊಳಗಾಗಿದೆ.
2017ರಲ್ಲಿ ಸಂಭವಿಸಿದ ಪ್ರವಾಹದಲ್ಲೂ ವೆಸ್ಲಿ ಸೇತುವೆ ಸುಮಾರು 50 ಮೀ.ಉದ್ದಕ್ಕೆ ಕಲ್ಲುಗಳು ಕುಸಿದಿದ್ದವು. ನಂತರ, 2 ಕೋಟಿ ರೂ. ವೆಚ್ಚದಲ್ಲಿ ಪುರಾತತ್ವ ಇಲಾಖೆ ದುರಸ್ತಿ ಪಡಿಸಿತ್ತು. ಆದರೀಗ ಮತ್ತೆ ಪ್ರವಾಹ ನೀರಿನ ರಭಸಕ್ಕೆ ಸೇತುವೆ ಮುಳುಗಡೆಯಾಗಿ ಹಾನಿಯಾಗಿದೆ.
1818ರಲ್ಲಿ ವೆಸ್ಲಿ ಸೇತುವೆಯನ್ನು ನಿರ್ಮಾಣ ಮಾಡಲಾಗಿದೆ. 200 ವರ್ಷಗಳ ಇತಿಹಾಸ ಹೊಂದಿರುವ ಪಾರಂಪರಿಕ ಸೇತುವೆ ಇದಾಗಿದೆ. ಬ್ರಿಟಿಷ್ ರಾಯಭಾರಿ ವೆಸ್ಲಿ ಅವರ ನೆನಪಿನಲ್ಲಿ ನಿರ್ಮಿಸಿದ ಸೇತುವೆ ಇದಾಗಿದೆ.