

ಯಾದಗಿರಿ : ಕೊಂಕಲ್‌ನ 110ಕೆವಿ ಸಬ್‌ಸ್ಟೇಷನ್‌ನಲ್ಲಿ ತ್ರೆöÊಮಾಸಿಕ ನಿರ್ವಹಣೆ ಕಾಮಗಾರಿಯನ್ನು ನಿರ್ವಹಿಸುತ್ತಿರುವ ಹಿನ್ನೆಲೆ 2025ರ ಮಾರ್ಚ್ 16ರ ಭಾನುವಾರ ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಯಾದಗಿರಿ ಜೆಸ್ಕಾಂ ಕಾರ್ಯ ಮತ್ತು ಪಾಲನಾ ವಿಭಾಗ ಕಾರ್ಯನಿರ್ವಾಹಕ ಅಭಿಯಂತರರು (ವಿ) ರಾಘವೇಂದ್ರ ಅವರು ತಿಳಿಸಿದ್ದಾರೆ.
110ಕೆವಿ ಕೊಂಕಲ್ ವಿದ್ಯುತ್ ಉಪಕೇಂದ್ರ, 110ಕೆವಿ ಎಲ್.ಐ.ಎಸ್ ಕೆಬಿಜೆಎನ್‌ಎಲ್ ಚಿನ್ನಾಕಾರ, ಮೆ.ಮ್ಯಾಟ್ರಿಕ್ಸ್ಸನ್ ಪವರ ಕೊಂಕಲ್ ಹಾಗೂ 33ಕೆವಿ ಜೈಗ್ರಾಮ ವಿದ್ಯುತ್ ಉಪ ಕೇಂದ್ರಗಳಿಗೆ ವಿದ್ಯುತ್ ಸರಬರಾಜು ನಿಲುಗಡೆ ಮಾಡಲಾಗುವುದು. ಈ 110ಕೆವಿ ಮತ್ತು 33ಕೆವಿ ವಿದ್ಯುತ್ ಉಪ ಕೇಂದ್ರಗಳಿAದ ವಿದ್ಯುತ್ ಸರಬರಾಜು ಮಾಡುವ ಎಲ್ಲಾ 11ಕೆವಿ ಮಾರ್ಗಗಳಿಂದ ವಿದ್ಯುತ್ ಸಂಪರ್ಕ ಕಲ್ಪಿಸಿರುವ ಕೊಂಕಲ್, ಕಂದಕೂರ, ಜೈಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ, ತಾಂಡಗಳಿಗೆ ಮತ್ತು ನೀರಾವರಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಗ್ರಾಹಕರು ಜೆಸ್ಕಾಂಗೆ ಸಹಕರಿಸುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ