

ಕಾರವಾರ: ಸ್ಟಾರ್ ಚಾಯ್ಸ್ ನೃತ್ಯ ಮತ್ತು ಕಲಾಕೇಂದ್ರ ಹಾಗೂ ಇತರ ಸಂಘಟನೆಗಳ ಬೆಂಬಲದಲ್ಲಿ ಮಾರ್ಚ್ 31 ರಿಂದ ಏ.20ರ ವರೆಗೆ "ಚಿಣ್ಣರ ಹೆಜ್ಜೆ" 11ನೇ ವರ್ಷದ ಬೇಸಿಗೆ ಶಿಬಿರವನ್ನುಆಯೋಜಿಸಲಾಗುತ್ತಿದೆ ಎಂದು ಶಿಬಿರದ ಮುಖ್ಯಸ್ಥ ರಾಜನ್ ಬಾನಾವಳಿಕರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬುದವಾರ ಮಾತನಾಡಿದ ಅವರು, ಬೇಸಿಗೆ ರಜೆ ಅವಧಿಯಲ್ಲಿ ಮಕ್ಕಳನ್ನು ಕ್ರಿಯಾಶೀಲವಾಗಿರಿಸಲು ಶಿಬಿರ ನಡೆಸಲಾಗುತ್ತಿದೆ. ಅದರಲ್ಲಿ ಯೋಗ, ನೃತ್ಯ, ಸಂಗೀತ, ಕರಾಟೆ, ಚಿತ್ರಕಲೆ, ಪೇಂಟಿಂಗ್, ಕ್ರಾಫ್ಟ್, ಕೈ ಮೊಡಲಿಂಗ್, ಕೀಬೋರ್ಡ್, ಪಿಯಾನೋ, ಮ್ಯೂಸಿಕ್, ವಿವಿಧ ರೀತಿಯ ಕ್ರೀಡೆ, ಬೀಚ್ ಟ್ರೆಕಿಂಗ್, ಬೋಟಿಂಗ್, ಸ್ವಿಮ್ಮಿಂಗ್ ತರಬೇತಿಯನ್ನು ಆಯೋಜಿಸಲಾಗುತ್ತಿದೆ. ರಾಷ್ಟ್ರಮಟ್ಟದ ನುರಿತ ಸಂಪನ್ಮೂಲ ವ್ಯಕ್ತಿಗಳು ವಿವಿಧ ವಿಭಾಗಗಳಲ್ಲಿ ತರಬೇತಿ ನೀಡುವರು ಎಂದರು.
ಸರ್ಕಾರಿ ನೌಕರರ ಸಂಘದ ನೌಕರರ ಭವನಲ್ಲಿ ಶಿಬಿರ ನಡೆಯಲಿದ್ದು, 5 ರಿಂದ 16 ವರ್ಷದ ಮಕ್ಕಳು ಪಾಲ್ಗೊಳ್ಳಲು ಅವಕಾಶವಿದೆ. ಶಿಬಿರಾರ್ಥಿಗಳಲ್ಲಿ ವ್ಯವಹಾರ ಜ್ಞಾನದ ಜೊತೆಗೆ, ಎಲ್ಲರಲ್ಲಿ ಬೆರೆಯುವ ಜ್ಞಾನವನ್ನು ಬೆಳೆಸಲು 'ಮಕ್ಕಳ ಸಂತೆ' ಎನ್ನುವಂತಹ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿದೆ. ರಿಯಾಲಿಟಿ ಶೋ, ಟಿವಿ ವಾಹಿನಿಯಲ್ಲಿ ಭಾಗವಹಿಸಿದ ಕಲಾವಿದರು ಕೂಡ ಈ ಶಿಬಿರದಲ್ಲಿ ಭೇಟಿ ನೀಡಲಿದ್ದಾರೆ. ಶಿಬಿರದ ಕೊನೆಯ ದಿನದಂದು ಜಿಲ್ಲಾ ರಂಗಮಂದಿರದಲ್ಲಿ ತರಬೇತಿ ಪಡೆದ ಶಿಬಿರಾರ್ಥಿಗಳಿಂದ ಕಲಾ ಪ್ರದರ್ಶನ ಹಾಗೂ ಸ್ಟಾರ್ ಚೊಯ್ಸ್ ಕಲಾವಿದರಿಂದ ನೃತ್ಯ ಮತ್ತು ರಸಮಂಜರಿ ಕಾರ್ಯಕ್ರಮಗಳು ನೆರವೇರಲಿದೆ. ಶಿಬಿರದಲ್ಲಿ ಭಾಗವಹಿಸಿದ ಎಲ್ಲ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ಪ್ರಶಸ್ತಿ ಫಲಕವನ್ನು ನೀಡಲಾಗುವುದು ಎಂದರು.
ಶಿಬಿರದಲ್ಲಿ ಪ್ರವೇಶ ಪಡೆಯಲು ಹಾಗೂ ಹೆಚ್ಚಿನ ಮಾಹಿತಿಗೆ ರಾಜನ್ (9483613834) ಜ್ಯೋತಿ ನಾಯ್ಕ (9113294513), ಅಭಿಷೇಕ (8310119940) ಸಂಪರ್ಕಿಸಬಹುದು ಎಂದರು. ಸ್ಟಾರ್ ಚಾಯ್ಸ್ ಗೌರವಾಧ್ಯಕ್ಷ ಗಿರೀಶ ರಾವ್, ಅಧ್ಯಕ್ಷ ರೋಹಿದಾಸ ಬಾನಾವಳಿಕರ, ಪ್ರಮುಖರಾದ ಸಂಜು ಚೆಂಡೇಕರ, ಜ್ಯೋತಿ ನಾಯ್ಕ, ಶ್ರೀಪಾದ ನಾಯ್ಕ, ವಿನಾಯಕ ಕೂರ್ಮಕರ, ಯಶೋಧಾ ಹಿಣಿ, ರೂಪಕ ನೇತಲಕರ, ಸಾಕ್ಷಿ ನೇತಲಕರ, ಎಲ್.ನಾಗವೇಣಿ ಸುದ್ದಿಗೋಷ್ಠಿಯಲ್ಲಿದ್ದರು.
ಇದನ್ನೂ ಓದಿ: ವಿಜಯವಾಣಿ ವಿಶೇಷ ಪುರವಣಿ "ಶಿರಸಿಯ ಸಿರಿದೇವಿ" ಬಿಡುಗಡೆ